No menu items!
27.8 C
Munich
Saturday, August 1, 2026

ಸಚಿವ ಕೆಜೆ ಜಾರ್ಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ತೆಲಂಗಾಣ ಮಾಜಿ ಕಾರ್ಪೋರೇಟರ್ ಅರೆಸ್ಟ್

Must read

ಬೆಂಗಳೂರು:- ಇಂಧನ ಸಚಿವರ ಬಗ್ಗೆ ಅವಹೇಳನ ಪೋಸ್ಟ್ ಮಾಡಿದ ಆರೋಪದಡಿ ತೆಲಂಗಾಣ ಮಾಜಿ ಕಾರ್ಪೋರೇಟರ ನ್ನು ಅರೆಸ್ಟ್ ಮಾಡಲಾಗಿದೆ.

ಕರೀಂ ನಗರದ ರವಿಕಾಂತಿ ಶರ್ಮಾ ಬಂಧಿತ ನಾಗಿದ್ದು, ಬಳಿಕ ಬಿಡುಗಡೆಗೊಳಿಸಿ ದ್ದಾರೆ. ಇತ್ತೀಚಿಗೆ ಮುಗಿದ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಸಚಿವರ ಕುರಿತು ಆರೋಪಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ. ತೆಲಂಗಾಣದ ಬಿಆರ್‌ಎಸ್ ಪಕ್ಷದಲ್ಲಿ ರವಿಕಾಂತಿ ಸಕ್ರಿಯ ಕಾರ್ಯ ಕರ್ತನಾಗಿದ್ದು, ಪಕ್ಷದ ಐಟಿ ಸೆಲ್‌ನಲ್ಲಿ ಆತ ಕೆಲಸ ಮಾ ಡುತ್ತಿದ್ದ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಹಾಗೂ ಗೃಹಜ್ಯೋತಿ ಯೋಜನೆ ಅನುಷ್ಠಾನದ ಕುರಿತು ‘ಎಕ್ಸ್ ‘ನಲ್ಲಿ ಇಂಧನ ಸಚಿವರ ನಕಲಿ ಆಡಿಯೋ ತುಣುಕನ್ನು ಆತ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.

- Advertisement -spot_img

More articles

- Advertisement -spot_img

Latest article