No menu items!
5.6 C
Munich
Wednesday, May 13, 2026

ಸಚಿವ ರಾಜಣ್ಣ ಹೇಳಿಕೆ ವಿಚಾರ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

Must read

ಬೆಂಗಳೂರು: ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಕೇಳೋಕೆ ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ, ಯಾರು ಬೇಡ ಅಂದಿಲ್ಲ ಎಂದರು. ಡಿಸಿಎಂ ಮಾಡುವುದರಿಂದಲೇ ಎಲ್ಲ ಆಗುತ್ತೆ ಅನ್ನೋದಾದ್ರೆ ಸಿಎಂನ ಮಾತ್ರ ಬಿಟ್ಟು ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ ಅಂದ್ರೆ ಆಗುತ್ತಾ?
ನಮ್ಮ ಕೆಲಸ ಏನು? ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ತಕ್ಕಂತೆ ಸೀಟುಗಳು ಬಂದಿಲ್ಲ. ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿಎಂ ಹುದ್ದೆನೂ ಕೇಳಿ, ಯಾರು ಬೇಡ ಅಂದೋರು. ನಿಮ್ಮಬಳಿ ಹೇಳಿದ್ರೆ ಆಗುತ್ತಾ ಎಂದು ಅಸಮಾಧಾನ ಹೊರಹಾಕಿದರು.

- Advertisement -spot_img

More articles

- Advertisement -spot_img

Latest article