ಕ್ರಿಕೆಟಿಗ ಮತ್ತು ಕನ್ನಡಿಗ ಮನೀಶ್ ಪಾಂಡೆ ಸಿನಿಮಾ ನಟಿ ಒಬ್ಬರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಗಾಢವಾಗಿ ಹರಿದಾಡುತ್ತಿದೆ. ಹೌದು ಕ್ರಿಕೆಟಿಗ ಮನೀಶ್ ಪಾಂಡೆ ಅವರ ಕುರಿತಾಗಿ ಈ ರೀತಿಯ ಸುದ್ದಿಯೊಂದು ಇದೀಗ ಹರಿದಾಡುತ್ತಿದ್ದು ನಟಿಯ ಜೊತೆ ವಿವಾಹವನ್ನು ಡಿಸೆಂಬರ್ 2 ನೇ ತಾರೀಕು ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.
ತುಳು ಚಿತ್ರವಾದ ತೆಲಿಕೆಡ ಬೊಳ್ಳು ಎಂಬ ಚಿತ್ರದ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದ 26 ವರ್ಷದ ಆಶ್ರಿತಾ ಶೆಟ್ಟಿ ಅವರ ಜೊತೆ ಮನೀಶ್ ಪಾಂಡೆ ಅವರ ವಿವಾಹ ನಡೆಯಲಿದೆ ಎಂಬ ಸುದ್ದಿ ಇದೀಗ ಎಲ್ಲಿದೆ ಹರಿದಾಡುತ್ತಿದೆ. ಇನ್ನು ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಆಶ್ರಿತಾ ತಮಿಳಿನಲ್ಲಿ ಒಟ್ಟು ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದು ಡಿಸೆಂಬರ್ ನಲ್ಲಿ ಮನೀಶ್ ಪಾಂಡೆ ಅವರ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಇದೆ.