ಜಗ್ಗೇಶ್ ಹೊಸ ವಿವಾದ..! ರಾಹುಲ್ ಗಾಂಧಿ ಅವರ ಹೆಸರನ್ನು ಕೆಟ್ಟದಾಗಿ ಬಳಸಿದ್ರಾ?

Must read

ನಿನ್ನೆಯಷ್ಟೇ ನಿರ್ದೇಶಕ ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಅವರ ಕಾಂಬಿನೇಷನ್ನ ಹೊಸ ಚಿತ್ರ ರಂಗನಾಯಕ ಟೀಸರ್ ಬಿಡುಗಡೆಯಾಗಿದೆ. ಮಠ ಮತ್ತು ಎದ್ದೇಳು ಮಂಜುನಾಥ ಗಳಂತಹ ಸೂಪರ್ ಹಿಟ್ ಚಿತ್ರ ನೀಡಿದ್ದ ಈ ಜೋಡಿ ಇದೀಗ ಮತ್ತೆ ರಂಗನಾಯಕ ಚಿತ್ರದ ಮೂಲಕ ಒಂದಾಗುತ್ತಿದೆ. ಇನ್ನು ಯಕ್ಷಗಾನ ಮತ್ತು ಹರಿಕಥೆ ಮಾದರಿಯಲ್ಲಿ ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಟೀಸರ್ ವೀಕ್ಷಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಹಿಂಬಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಈ ರೀತಿಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಂಗನಾಯಕ ಚಿತ್ರದ ಟೀಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣ ಚಿತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಚಿನ್ಹೆಗಳನ್ನು ಬಳಸಿ ಕಾಂಗ್ರೆಸ್ ಪಕ್ಷದ ಚಿಹ್ನೆಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಅಷ್ಟೆ ಅಲ್ಲದೆ ರಾಹುಲ್ ಗಾಂಧಿ ಅವರ ಹೆಸರನ್ನು ರಾಹುಲ್ ಗಾಂಢಿ ಎಂದು ಹೇಳುವುದರ ಮೂಲಕ ಗಾಂಧಿ ಅವರ ಹೆಸರಿಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ಸಿಗರು ಚಿತ್ರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article