ಸೆಲ್ಫಿ ತರುತ್ತೆ ಪ್ರಾಣಕ್ಕೆ ಕುತ್ತು!

Date:

ಸೆಲ್ಫಿ ತೆಗೆದುಕೊಳ್ಳುವುದು ಈಗಿನ ಜನರೇಷನ್ ಟ್ರೆಂಡ್. ಕುಂತರೂ, ನಿಂತರೂ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಚೆನ್ನಾಗಿ ಕಾಣಿಸಬೇಕೆಂದು ಹೇಗೇಗೋ ಸೆಲ್ಫಿ ಕ್ಲಿಕ್ ಮಾಡ್ತೀರಿ. ಆದರೆ ಶಾಕಿಂಗ್ ಸುದ್ದಿ ಕೇಳಿ ಇನ್ನು ಮುಂದೆ ನೀವು ಸೆಲ್ಫೀ ತೆಗಿಯಲ್ಲ. ಯಾಕಂದ್ರೆ ಸೆಲ್ಫೀಯಿಂದ ಮುಖದಲ್ಲಿ ಬೇಗನೆ ಸುಕ್ಕು ಕಾಣಿಸಿಕೊಳ್ಳುತ್ತದೆ. ಇದರಿಂದ ಅಂದ ಚೆಂದ ಎಲ್ಲವೂ ಬ್ಯೂಟಿ ಆ್ಯಪ್ಗೆ ಮಾತ್ರ ಸೀಮಿತವಾಗಬಹುದು! ಸೆಲ್ಫೀ ತೆಗೆದುಕೊಳ್ಳುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುವುದು ನಿಮ್ಮ ತ್ವಚೆಗೆ. ತ್ವಚೆ ಉತ್ತಮವಾಗಿರಬೇಕೆಂದು ಏನೇನೋ ಕ್ರೀಮ್ ಹಚ್ಚುತ್ತೀರಿ. ಇಷ್ಟೆಲ್ಲಾ ಮಾಡಿ ದಿನ ಪೂರ್ತಿ ಸೆಲ್ಫೀ ತೆಗೆದರೆ ತ್ವಚೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಸೆಲ್ಫೀ ಸ್ಪೆಷಲಿಸ್ಟ್ ಹೇಳುವಂತೆ ಫೋಟೋ ತೆಗೆಯುವ ಸಮಯದಲ್ಲಿ ಮುಖದ ಮೇಲೆ ಬೀಳುವ ನೀಲಿ ಲೈಟ್ ಮತ್ತು ಇಲೆಕ್ಟ್ರೋಮೈಗ್ರೇಟಿಕ್ ರೇಡಿಯೇಷನ್ ಸ್ಕಿನ್ಗೆ ತುಂಬಾ ಹಾನಿಕಾರಕ. ಸೆಲ್ಫೀ ತೆಗೆಯುವಾಗ ಮೊಬೈಲ್ನಿಂದ ಹೊರಡುವ ರೇಡಿಯೇಷನ್ ಅನ್ನುಯನ್ನು ಯಾವುದೇ ಸನ್ಸ್ಕ್ರೀನ್ ಕೂಡ ತಡೆಯೋದಿಲ್ಲ. ಇದರಿಂದ ತ್ವಚೆ ಬೇಗ ಹಾಳಾಗುತ್ತದೆ. ಪದೇ ಪದೇ ಸೆಲ್ಫೀ ತೆಗೆಯುವುದರಿಂದ ಬೇಗ ವಯಸ್ಸಾಗುವಿಕೆಯ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಮುಖದಲ್ಲಿ ಸುಕ್ಕು ಕಾಣಿಸ್ಕೊಳ್ಳುತ್ತದೆ. 20ರ ಹರೆಯದಲ್ಲೇ 30ರಂತೆ ಕಾಣಿಸೋದು ಖಂಡಿತಾ. ಸೆಲ್ಫೀ ತೆಗೆಯುವಾಗ ಮೊಬೈಲ್ನಿಂದ ಹೊರಬರುವ ಹಾನಿಕಾರಕ ರೇಡಿಯೇಷನ್ ತ್ವಚೆಯಲ್ಲಿರುವ ಡಿಎಎನ್ಎ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ಕಿನ್ ರಿಪೇರಿಂಗ್ ಕ್ಷಮತೆ ಕಡಿಮೆಯಾಗುತ್ತದೆ. ಯಾವುದೇ ಕ್ರೀಮ್, ಸನ್ ಸ್ಕ್ರೀನ್ ಬಳಸಿದರೂ, ಇದು ಕಡಿಮೆಯಾಗೋಲ್ಲ.
-ಸೆಲ್ಫೀಯಿಂದ ಮುಖದ ನಿಖರತೆಯೂ ಮಾಸುತ್ತದೆ. ಅದಕ್ಕೇ ಹೇಳುತ್ತಿರುವುದು ಇನ್ನು ಮುಂದೆ ಸೆಲ್ಫೀ ತೆಗೆಯುವ ಮುಂದೆ ಫೋಟೋಗೆ ಫೋಸ್ ಕೊಡುವಂಥ ಮುಖವೇ ಉಳಿಸಿಕೊಳ್ಳಲು ಅಸಾಧ್ಯವಾಗಬಹುದು ಎಂಬುದನ್ನು ನೆನಪಿನಲ್ಲಿಡಬೇಕಾಗುತ್ತೆ.

Share post:

Subscribe

spot_imgspot_img

Popular

More like this
Related

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...