No menu items!
20.3 C
Munich
Friday, August 21, 2026

ಸೈಟ್‌ ವಿಚಾರಕ್ಕೆ ಗಲಾಟೆ: ಮನೆಗೆ ಹೋಗಿದ್ದ ವ್ಯಕ್ತಿ ಸಾವು

Must read

ಬೆಂಗಳೂರು: ಸೈಟ್‌ ವಿಚಾರಕ್ಕೆ ಗಲಾಟೆ ಮಾಡಿ ನಂತರ ಮನೆಗೆ ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೊಡಿಗೆಹಳ್ಳಿ ಬಳಿಯ ಎನ್.ಟಿ‌.ಐ ಲೇಔಟ್ನಲ್ಲಿ ನಡೆದಿದೆ. ಪ್ರಕಾಶ್ ಮೃತ ರ್ದುದೈವಿ ಎಂದು ತಿಳಿದು ಬಂದಿದೆ. ಪ್ರಕಾಶ್ ಎಂಬುವವರಿಗೆ ಸೇರಿದ ಸೈಟ್ ಎನ್.ಟಿ.ಐ ಕಾಲೋನಿಯಲ್ಲಿದೆ.ಈ ಸೈಟ್ ವಿಚಾರವಾಗಿ ಸಾಕಷ್ಟು ದಿನಗಳಿಂದ ನಾಗರಾಜ್ ಮತ್ತು ಪ್ರಕಾಶ್ರವರ ಮಧ್ಯೆ ಈ ವಿಚಾರವಾಗಿ ಗಲಾಟೆಯಾಗುತ್ತಿತ್ತು. ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೂಡ ಪ್ರಕಾಶ್ , ನಾಗರಾಜ್ ಎಂಬಾತನ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಮಾಡಿಕೊಳ್ಳಬೇಡಿ. ಕೋರ್ಟ್ ವಿಚಾರ ಕೋರ್ಟ್ನಲ್ಲಿ ಬಗೆಹರಿಸಿ ಎಂದು ಸೂಚಿಸಿ ವಾಪಸ್ಸು ಕಳಿಸಿದ್ದಾರೆ
ಇನ್ನು ಪೊಲೀಸರು ಜಗಳವನ್ನು ಶಾಂತ ಮಾಡಿ ಮನೆಗೆ ಕಳುಹಿಸಿದ್ದಾರೆ. ನಂತರ ಮನೆಗೆ ಹೋದಾಗ ಪ್ರಕಾಶ್ ಅವರು ಎದೆ ನೋವು ಎಂದು ಹೇಳಿಕೊಂಡಿದ್ದಾರೆ. ಕೂಡಲೇ ಹತ್ತಿರದ ಉಮಾಶಂಕರ್ ಎಂಬ ಕ್ಲಿನಿಕ್ಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಇಲ್ಲ ಆಗಲ್ಲ ಎಂದು ಬೇರೊಂದು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಅದರಂತೆ ಬೇರೆ ಆಸ್ಪತ್ರೆಗೆ ಹೋಗಿದ್ದು, ಇವರು ಇಲ್ಲಿಗೆ ಬರುವ ಮೊದಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಯಾವಾಗ ಪ್ರಕಾಶ್ ಸಾವನ್ನಪ್ಪಿರುವ ವಿಷಯ ಕುಟುಂಬಸ್ಥರಿಗೆ ತಿಳಿಯಿತೋ, ಪ್ರಕಾಶ್ನದು ಸಹಜ ಸಾವಲ್ಲ, ಇದು ಕೊಲೆ ಎಂದು ಅರೋಪಿಸಿದ್ದಾರೆ. ಈ ಹಿನ್ನಲೆ ಲಿಖಿತ ದೂರು ನೀಡುವಂತೆ ಪೊಲೀಸರು ಸಂಬಂಧಿಕರಿಗೆ ಸೂಚನೆ ನೀಡಿದ್ದು, ದೂರಿನ ಆಧಾರದ ಮೇಲೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -spot_img

More articles

- Advertisement -spot_img

Latest article