No menu items!
10.9 C
Munich
Tuesday, May 5, 2026

ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ನೆರವೇರಿಸಿದ ನಟ ವಿನೋದ್ ರಾಜ್

Must read

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಾಯಿ ಅಗಲಿಕೆಯ ನೋವಿನ ನಡುವೆಯೇ ಇಂದು ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ವಿನೋದ್ ನೆರವೇರಿಸಿದ್ದಾರೆ. ಕನ್ನಡದ ಹಿರಿಯ ನಟಿ, ಬೆಳ್ಳಿ ಪರದೆಯಲ್ಲಿ 6 ದಶಕಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಮನಸ್ಸು ಗೆದ್ದಿದ್ದ ನಾಯಕಿ, ಪೋಷಕ ನಟಿಯಾಗಿ, ನೂರಾರು ಪಾತ್ರಗಳಿಗೆ ಜೀವ ತುಂಬಿದ್ದ ನಟಿ ಲೀಲಾವತಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರನೇ ದಿನವಾಗಿದ್ದು, ಹಾಲುತುಪ್ಪ ಕಾರ್ಯವನ್ನ ಇಂದು ಕುಟುಂಬಸ್ಥರು ನೆರವೇರಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳಿಂದ ಹಾಸಿಗೆ ಹಿಡಿದಿದ್ದ ಅವರು ಶುಕ್ರವಾರ ಸಂಜೆ ಇಹಲೋಕದ ಪಯಣ ಮುಗಿಸಿ ಚಿರನಿದ್ರೆಗೆ ಜಾರಿದ್ದರು. ನಿನ್ನೆ ನೆಲಮಂಗಲದ ಸೋಲದೇವನಹಳ್ಳಿಯ ತಮ್ಮ ನೆಚ್ಚಿನ ಕನಸಿನ ತೋಟದ ಮನೆಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆದಿತ್ತು.

- Advertisement -spot_img

More articles

- Advertisement -spot_img

Latest article