No menu items!
9.8 C
Munich
Thursday, May 7, 2026

ಹೊಸ ವರ್ಷಕ್ಕೆ ಹಾಕಬೇಕು ಸ್ವಯಂ ಬ್ರೇಕ್ !

Must read

ಎಲ್ಲೆಲ್ಲೂ ಕೊರೊನಾ ಭಯ ಆವರಿಸಿದೆ, ಕೋವಿಡ್-19 ವೈರಸ್ ಉಪತಳಿ ಹರಡುತ್ತಿರುವ ರೀತಿ ನೋಡಿದರೆ ಎಂತಹವರಿಗೂ ಭಯ ಆಗುತ್ತದೆ. 2019 ರಲ್ಲಿ ಕಾಣಿಸಿಕೊಂಡ ಕೋವಿಡ್-19 ರೂಪಾಂತರಗೊಳ್ಳುತ್ತಲೇ ಇದೆ. ಡೆಲ್ಟಾ, ಓಮಿಕ್ರಾನ್ ಕೊರೊನಾ ವೈರಸ್ನ ಉಪತಳಿಯೇ ಜೆಎನ್.1. ಇದು ದೇಶ, ವಿದೇಶಗಳಲ್ಲಿ ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟದಿಂದ ಬಳಲಿ ಬೆಂಡಾಗಿದ್ದ ದೇಶಗಳು ಇದೀಗ ಮತ್ತೆ ಚಿಂತೆಯಲ್ಲಿ ಮುಳುಗಿವೆ.

ಇನ್ನೂ ಜೆಎನ್.1 ಉಪತಳಿ ಭಾರತಕ್ಕೂ ಕಾಲಿಟ್ಟಿದೆ. ಡಿಸೆಂಬರ್ 6 ರಂದು ಕೇರಳದಲ್ಲಿ 79 ವರ್ಷದ ವೃದ್ಧೆಯಲ್ಲಿ ಈ ಸೋಂಕು ಪತ್ತೆಯಾಯಿತು. ಜೆಎನ್.1 ಸೋಂಕಿಗೆ ಭಾರತದಲ್ಲಿ ಮೊದಲ ಬಲಿಯೂ ಆಗಿದೆ. ಅಷ್ಟೇಅಲ್ಲದೇ, ರಾಜ್ಯದಲ್ಲಿ ಕೊರೊನಾಕ್ಕೆ ಮೂವರು ಮೃತಪಟ್ಟಿದ್ದಾರೆ. ಒಟ್ಟು 92 ಸಕ್ರಿಯ ಪ್ರಕರಣಗಳು ಇರುವ ಕರ್ನಾಟಕವು ದೇಶದ ಎರಡನೇ ರಾಜ್ಯವಾಗಿ ಗುರುತಿಸಿಕೊಂಡಿದೆ. ಇನ್ನೂ ಒಟ್ಟಾರೆ ದೇಶದಲ್ಲಿದ್ದ ಕೊರೊನಾ ಪ್ರಕರಣವು 3000ರ ಗಡಿ ದಾಟಿದೆ. ಹೀಗಾಗಿ ಕೊರೊನಾ ಹೆಚ್ಚುತ್ತಿರುವುದರಿಂದ ನಿಗದಿತ ವಯೋಮಾನದವರಿಗೆ, ಮಕ್ಕಳಿಗೆ, ಬಾಣಂತಿಯರಿಗೆ ಮಾಸ್ಕ್ ಕಡ್ಡಾಯ ಸೇರಿದಂತೆ ಕೆಲವು ಮಾರ್ಗಸೂಚಿ ಹೊರಡಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಪ್ರಯುಕ್ತ ಮತ್ತಷ್ಟು ನಿರ್ಬಂಧ ಹೇರಿದರೂ ಅಚ್ಚರಿ ಪಡಬೇಕಿಲ್ಲ.

- Advertisement -spot_img

More articles

- Advertisement -spot_img

Latest article