ಹೌದು, ನಾನು ಎಂಗೇಜ್ ಆಗಿದ್ದೇನೆ !

Date:

ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದು, ನನ್ನ ಜೀವನದಲ್ಲಾದ ಕಹಿ ಘಟನೆಯಿಂದ ಸಾಕಷ್ಟು ಪಾಠ ಕಲಿತಿರುವೆ. ಅಪ್ಪ ಅಮ್ಮನ ಬೆಲೆ ಏನು ಅಂತ ಗೊತ್ತಾಗಿದೆ. ಕಷ್ಟ ಇದ್ದಾಗ ನಮ್ಮ ಜೊತೆ ಇರೋದು ತಾಯಿ, ತಂದೆ ಅಷ್ಟೆ. ಯಾವತ್ತೂ ಯಾರೂ ಅಮ್ಮ ಅಪ್ಪ ಪ್ರೀತಿ ಕಳೆದುಕೊಳ್ಳಬೇಡಿ,’ ಎಂದು ಸಂಜನಾ ಮಾತು ಕಿವಿ ಮಾತು ಹೇಳಿದ್ದಾರೆ. ಜನರು ಆಡಿಕೊಳ್ಳುವ ಸಾವಿರ ಕೆಟ್ಟ ಮಾತುಗಳನ್ನ ಕೇಳಿದ್ರೆ, ಕಿವಿಯಲ್ಲಿ ರಕ್ತ ಬರುತ್ತದೆ. ಯಾರು ಕಣ್ಣೀರು ನೋಡಿಲ್ಲ. ಒಂದೇ ಒಂದು ಎವಿಡೆನ್ಸ್‌ ಇಲ್ಲದೇ, ನನ್ನ ಬಗ್ಗೆ ಸಾವಿರಾರು ಕೆಟ್ಟ ಮಾತುಗಳನ್ನು ಆಡಿದ್ದೀರಿ. ನಾನು ಸೆಲೆಬ್ರಿಟಿ ಆಗಿದ್ದೇ ತಪ್ಪಾಯಿತು. ನಾನು ಯಾರಿಗೂ ಮೋಸ ಮಾಡಿಲ್ಲ.

ತಪ್ಪು ಮಾಡಿಲ್ಲ. ಒಂದು ರೂಪಾಯಿ ಯಾಮಾರಿಸಿಲ್ಲ. ಅದರಲ್ಲೂ ಡ್ರೆಗ್ಸ್‌ ವಿಚಾರವನ್ನು ಆ ದೇವರೇ ನೋಡಿ ಕೊಳ್ಳುತ್ತಾನೆ ಎಂದ ಸಂಜನಾ ಜೈಲಿನಲ್ಲಿದ್ದಾಗ ಅವರ ಮದುವೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಕೆಲವು ಚಿತ್ರಗಳು ಸಹ ವೈರಲ್ ಆಗಿದ್ದವು ಅದರ ಬಗ್ಗೆ ಮಾತನಾಡಿರುವ ಸಂಜನಾ, ‘ಹೌದು, ನಾನು ಎಂಗೇಜ್ ಆಗಿದ್ದೇನೆ. ಲಾಕ್‌ಡೌನ್ ಸಮಯದಲ್ಲಿ ಸರಳ ಸಮಾರಂಭದಲ್ಲಿ ಎಂಗೇಜ್‌ಮೆಂಟ್ ಮುಗಿದಿದೆ. ಈ ವಿಷಯವನ್ನು ನನ್ನ ಬಂಧುಗಳಿಗೆ, ಸ್ನೇಹಿತರಿಗೆ ಸಹ ತಿಳಿಸಲಾಗದ ಹಾಗೆ ಆಗಿಬಿಟ್ಟಿತು’ ಎಂದು ನೊಂದುಕೊಂಡಿದ್ದಾರೆ.ನಾನು ಅಧ್ಯಾತ್ಮದ ಕಡೆ ಗಮನವಹಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಮಾಜು ಓದುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಕರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟವಳು, ಎಲ್ಲ ಧರ್ಮಗಳನ್ನು ನಾನು ಸಮಾನವಾಗಿ ಗೌರವಿಸುತ್ತೇನೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನನ್ನ ವೈಯಕ್ತಿಕ ಆಯ್ಕೆ. ನನ್ನ ಈ ನಿರ್ಧಾರವನ್ನು ರಾಜಕೀಯಗೊಳಿಸುವುದು, ವಿಮರ್ಶೆಗೊಳಪಡಿಸುವುದು ನನಗೆ ಇಷ್ಟವಿಲ್ಲ’ ಎಂದಿದ್ದಾರೆ ನಟಿ ಸಂಜನಾ.

 

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...