18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!

0
85

ಕೃಷಿ ಕೆಲಸ ಸಾಮಾನ್ಯದಲ್ಲ. ಅದು ಪ್ರತಿ ಕ್ಷಣಕ್ಕೂ ಶ್ರಮವನ್ನು ಬಯಸುವ ಕೆಲಸ. ನಮ್ಮ ರೈತರಿಗೆ ಮಾತ್ರ ಇದರ ಅನುಭವವಿದೆ. ಆದರೆ ಇಲ್ಲೋರ್ವ ರೈತನಿದ್ದಾನೆ. ಈತ ಇತರ ರೈತರಿಗಿಂತ ತುಸು ಹೆಚ್ಚೇ ಶ್ರಮಪಡುತ್ತಾನೆ. ಹಗಲಿರುಳೆನ್ನದೆ ದುಡಿಯುತ್ತಾನೆ. ಅಲ್ಲದೇ ಇತರರಿಗೆ ಮಾದರಿಯೂ ಆಗಿದ್ದಾನೆ..! ಇಷ್ಟಕ್ಕೂ ಆ ರೈತ ಯಾರು? ಆತನ ಸಮಸ್ಯೆ ಏನು..? ಆತನ ಸಾಧನೆ ಎಂಥಾದ್ದು..? ಎಂಬುದನ್ನು ತಿಳಿದರೆ ಪ್ರತಿಯೊಬ್ಬರೂ ಕೂಡಾ ಅಚ್ಚರಿ ಪಡುತ್ತಾರೆ..!
ಯೆಸ್.. ರಾಜಸ್ತಾನದ ಶ್ರೀಗಂಗಾನಗರ ಜಿಲ್ಲೆಯ ರಾಮಚಂದ್ರ ಎಂಬ ರೈತನಿಗೆ ಇರುವುದು ಒಂದೇ ಕಾಲು. ಆದರೆ ಕೆಲಸ ಮಾಡದೇ ಇರುವಂತಿಲ್ಲ. ಕೆಲಸ ಮಾಡದಿದ್ದರೆ ಮನೆಯ ಸದಸ್ಯರನ್ನು ಉಪವಾಸ ಹಾಕಬೇಕಾಗುತ್ತದೆ. ಆದ್ದರಿಂದ ಒಂದೇ ಕಾಲಿನ ಸಹಾಯದಿಂದ ಸುಮಾರು 18 ವರ್ಷದಿಂದ ಕೃಷಿ ಕೆಲಸ ಮಾಡುತ್ತಿದ್ದಾರೆ.
ರಾಮಚಂದ್ರರವರು ಕೆಲಸಕ್ಕೆ ನಿಂತರೆ ಎರಡು ಕಾಲು ಇರುವವರು ನಾಚುವಂತೆ ಕೆಲಸ ಮಾಡುತ್ತಾರೆ. ಅಲ್ಲದೇ ಯಾರ ಸಹಾಯವೂ ಪಡೆಯದೇ ಸರಿಯಾದ ಸಮಯಕ್ಕೆ ಕೆಲಸ ಮುಗಿಸುತ್ತಾರೆ. ಆದರೆ ಅಗತ್ಯ ಸಮಯದಲ್ಲಿ ಮಾತ್ರ ಕೆಲಸಗಾರರ ಸಹಾಯ ಪಡೆಯುತ್ತಾರೆ. ಅವರ ಈ ಇಚ್ಛಾಶಕ್ತಿಯಿಂದಲೇ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ.
ಒಂದು ಸಮಯದಲ್ಲಿ ರಾಮಚಂದ್ರರವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಅದರಿಂದ ಏನೂ ಉಪಯೋಗ ಇಲ್ಲ ಎಂಬುದನ್ನರಿತ ಅವರು ಕೃಷಿ ಕಾಯಕದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಎಂಥದ್ದೇ ಸಮಸ್ಯೆ ಎದುರಾದರೂ ಕೂಡಾ ಅದನ್ನು ಎದುರಿಸಿ ನಿಂತರು. ಆದ್ದರಿಂದ ಸಮಸ್ಯೆಗಳು ದೂರಾದವು. ಎಲ್ಲಾ ಕೆಲಸಗಳು ಸುಲಭವಾದವು.
ಕಾಲಿಲ್ಲ ಎಂದು ಮನೆಯಲ್ಲಿ ಕೂರುವ ಬದಲು ರಾಮಚಂದ್ರರವರು ಒಂದೇ ಕಾಲಿನ ಸಹಾಯದಿಂದ ಕೃಷಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರೆ ಇಂದು ಇಷ್ಟು ದೊಡ್ಡ ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏನೇ ಆಗಲಿ ನಮ್ಮ ರೈತರಿಗೆ ರಾಮಚಂದ್ರರವರು ಮಾದರಿಯೇ ಸರಿ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

LEAVE A REPLY

Please enter your comment!
Please enter your name here