No menu items!
15.1 C
Munich
Wednesday, May 6, 2026

2024ರಲ್ಲಿ ಭಾರತದ ಗದ್ದುಗೆ ಯಾರ ಪಾಲಾಗಲಿದೆ?!

Must read

ಲೋಕಸಭೆ ಚುನಾವಣೆ 2024 ಸಮೀಸುತ್ತಿದ್ದು, ಭಾರತದ ಮುಂದಿನ ಪ್ರಧಾನಮಂತ್ರಿ ಯಾರಾಗಲಿದ್ದಾರೆ ಎಂಬುದರ ಮೇಲೆ ಸಾಕಷ್ಟು ಸಮೀಕ್ಷೆಗಳು ನಡೆಯುತ್ತಲೇ ಇವೆ. ಈ ಮಧ್ಯೆ ಮೋದಿ ಕುರಿತು ಜ್ಯೋತಿಷಿಯೊರ್ವರು ಭವಿಷ್ಯ ನುಡಿದ್ದಾರೆ

2024ರಲ್ಲಿ ಭಾರತದ ಗದ್ದುಗೆ ಯಾರ ಪಾಲಾಗಲಿದೆ ಅನ್ನೋ ಪ್ರಶ್ನೆಗೆ ರಾಜಕೀಯ ವಲಯದಲ್ಲಿ ಅವರದ್ದೆ ಆದ ವ್ಯಾಖ್ಯಾನಗಳು ಶುರುವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರವನ್ನ ಸ್ವೀಕರಿಸುವ ಅದಮ್ಯ ವಿಶ್ವಾಸದಲ್ಲಿದ್ದಾರೆ. ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್ ಹಾಗೂ ಉಳಿದ ಪಕ್ಷಗಳು ಮೈತ್ರಿ ಮಾಡಿಕೊಂಡು ಮೋದಿಯನ್ನ ಮಣಿಸೋಕೆ ಸ್ಟ್ರಾಟಜಿ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ ಎಂಬ ಸುದ್ದಿ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡ್ತಾ ಇದೆ.


ಸದ್ಯ ಮೋದಿ ಕುರಿತು ಜ್ಯೋತಿಷಿ ದ್ವಾರಕಾನಾಥ್ ಭವಿಷ್ಯ ನುಡಿದಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಪುನಃ ಗೆದ್ದು ಬಂದು ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ಎಲ್ಲರ ನಿರೀಕ್ಷೆಯಂತೆ ಅವರೇ ಗೆದ್ದು ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದರು. ಇದೇ ವೇಳೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನಗಳು ಬರಬಹುದು ಎಂದು ಕೇಳಿದಾಗ, ಇದಕ್ಕೆ ಮೇ 1ರಂದು ಉತ್ತರ ಹೇಳುತ್ತೇನೆ. ಜ್ಯೋತಿಷ್ಯದ ಲೆಕ್ಕಾಚಾರಗಳು ಆಗಾಗ ಬದಲಾಗುತ್ತಿರುತ್ತವೆ. ಏ. 1ರಂದು ಬದಲಾಗುತ್ತದೆ. ಮೇ 15ರ ಬಳಿಕ ಚುನಾವಣೆ ನಡೆಯಲಿದೆ. ಹಾಗಾಗಿ, ನಾನು ಮೇ 1ರಂದು ಬಿಜೆಪಿ ಗಳಿಸಬಹುದಾದ ಸ್ಥಾನಗಳ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಬೈಟ್: ದ್ವಾರಕಾನಾಥ್, ಜ್ಯೋತಿಷಿ ರಾಜಗುರು
ಒಟ್ಟಾರೆ ವರ್ಷಾಂತ್ಯದ ಸಂದರ್ಭದಲ್ಲಿ ರಾಜಗುರು, ಆಧ್ಯಾತ್ಮಿಕ ಗುರು ದ್ವಾರಕನಾಥ್ ಅವರು ನುಡಿದ ಭವಿಷ್ಯ ಭಾರೀ ಕುತೂಹಲ ಮೂಡಿಸಿದೆ.

- Advertisement -spot_img

More articles

- Advertisement -spot_img

Latest article