No menu items!
5.3 C
Munich
Monday, April 20, 2026

31, 531 ಮಂದಿಗೆ ಕೋವಿಡ್ ಪಾಸಿಟಿವ್ – 403 ಸಾವು

Must read

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳಲ್ಲಿ ಇಳಿಮುಖವಾಗುತ್ತಿದೆ. ಭಾನುವಾರ ಸಂಜೆ ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 31,531 ಸೋಂಕಿತರು ಪತ್ತೆಯಾಗಿದ್ದಾರೆ.

ಆರೋಗ್ಯ ಇಲಾಖೆಯ ವರದಿ   ಪ್ರಕಾರ, ವಿವಿಧ ಭಾಗಗಳಲ್ಲಿ ಇಂದು ಒಟ್ಟು 36,475 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 6,00,147 ಸಕ್ರಿಯ ಪ್ರಕರಣಗಳಿವೆ. ಇಂದೂ ಸಾವಿನ ಪ್ರಮಾಣ ಅಧಿಕವಾಗಿದೆ. 403 ಸೋಂಕಿತರು ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 21,837ಕ್ಕೆ ತಲುಪಿದೆ.

ಇದುವರೆಗೂ 22,03,462 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ 15,81,457 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ 27.84ರಷ್ಟಿದ್ದರೆ, ಮರಣ ಪ್ರಮಾಣ ಶೇ 1.27ರಷ್ಟಿದೆ.

ರಾಜ್ಯದಲ್ಲಿ ಇಂದು ಒಟ್ಟು 17,462 ಮಂದಿಗೆ ಲಸಿಕೆ ನೀಡಲಾಗಿದೆ. ಅವರಲ್ಲಿ 6,664 ಮಂದಿ ಎರಡನೆಯ ಡೋಸ್ ಪಡೆದವರಾಗಿದ್ದರೆ, 10,798 ಮಂದಿ ಮೊದಲ ಡೋಸ್ ಪಡೆದವರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 8,344 ಮಂದಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ನಗರದಲ್ಲಿ 13,612 ಮಂದಿ ಇಂದು ಬಿಡುಗಡೆ ಹೊಂದಿದ್ದು, 3,61,380 ಸಕ್ರಿಯ ಪ್ರಕರಣಗಳಿವೆ. ರಾಜಧಾನಿಯಲ್ಲಿ 143 ಕೋವಿಡ್‌ಗೆ ಬಲಿಯಾಗಿರುವುದು ವರದಿಯಾಗಿದೆ.

 

ತುಮಕೂರಿನಲ್ಲಿ 2,138 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮೈಸೂರಿನಲ್ಲಿ 1,811 ಮಂದಿ, ಉತ್ತರ ಕನ್ನಡದಲ್ಲಿ 1087, ಹಾಸನದಲ್ಲಿ 1182, ದಾವಣಗೆರೆಯಲ್ಲಿ 1155, ಬೆಂಗಳೂರು ಗ್ರಾಮಾಂತರ 1082, ಬೆಳಗಾವಿ 1762 ಮತ್ತು ಬಳ್ಳಾರಿಯಲ್ಲಿ 1729 ಮಂದಿಗೆ ಸೋಂಕು ದೃಢಪಟ್ಟಿದೆ.

ಬೀದರ್‌ನಲ್ಲಿ 129 ಜನರಿಗೆ ಸೋಂಕು ತಗುಲಿದ್ದು, ಇಂದು ಅತಿ ಕಡಿಮೆ ಸೋಂಕಿತರು ದಾಖಲಾದ ಜಿಲ್ಲೆಯಾಗಿದೆ. ಕೊಡಗಿನಲ್ಲಿ 191, ಹಾವೇರಿಯಲ್ಲಿ 184, ಯಾದಗಿರಿಯಲ್ಲಿ 233, ವಿಜಯಪುರದಲ್ಲಿ 330 ಸೋಂಕಿತರು ಪತ್ತೆಯಾಗಿದ್ದಾರೆ.

ಬಾಗಲಕೋಟೆ 431, ಚಾಮರಾಜನಗರ 440, ಚಿಕ್ಕಬಳ್ಳಾಪುರ 558, ಚಿಕ್ಕಮಗಳೂರು 963, ಚಿತ್ರದುರ್ಗ 640, ದಕ್ಷಿಣ ಕನ್ನಡ 957, ಧಾರವಾಡ 937, ಗದಗ 453, ಕಲಬುರಗಿ 645, ಕೋಲಾರ, 569, ಕೊಪ್ಪಳ 617, ಮಂಡ್ಯ 709, ರಾಯಚೂರು 464, ರಾಮನಗರ 403, ಶಿವಮೊಗ್ಗ 643, ಉಡುಪಿ 745 ಪ್ರಕರಣಗಳು ಖಚಿತವಾಗಿವೆ.

 

 

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article