No menu items!
12.4 C
Munich
Wednesday, April 29, 2026

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

Must read

ಅವನು ಮೂರನೇ ತರಗತಿಯ ಓದ್ತಾ ಇರೊ ಪೋರ..! ಅವನಿಗೆ ಕಂಪ್ಯೂಟರ್, ಸೈಬರ್, ಐಟಿ ಬಗ್ಗೆ ಎಷ್ಟರ ಮಟ್ಟಿಗೆ ಜ್ಞಾನವಿರಬಹದು…?! ಅಯ್ಯೋ ಮೂರ್ನೇ ಕ್ಲಾಸ್ ಓದ್ತಾ ಇದ್ದಾನೆ ಅಂತ ಹೇಳ್ತೀಯಾ.. ಹೆಚ್ಚೆಂದ್ರೆ ಕಂಪ್ಯೂಟರ್ನಲ್ಲಿ ಗೇಮ್ ಆಡೋದು ಚೆನ್ನಾಗಿ ಬರುತ್ತೇನೋ ಅಷ್ಟೇ..?! ಅದರಲ್ಲೇನು ಜ್ಞಾನದ ವಿಷಯ ಬರುತ್ತೇ..?! ಎಲ್ಲಾ ಮಕ್ಕಳಿಗೂ ಈ ಆಟದ ಬಗ್ಗೆ ಗೊತ್ತಿರುತ್ತೆ..?! ಅಂತ ನೀವು ಅನ್ಕೊಳ್ತೀರಾ…!?

ಈ ಹುಡುಗ ಎಲ್ಲಾ ಮಕ್ಕಳಂತೆ ಆಟ ಆಡ್ತಾ ಇರೋನಾಗಿದ್ರೆ ನಾನು ಇಲ್ಲಿ ಈತನ ಬಗ್ಗೆ ಹೇಳೋ ಪ್ರಮೆಯವೇ ಇರ್ತಾ ಇರ್ಲಿಲ್ಲ..! ಈ ಹುಡುಗ ಅದೆಂಥಾ ಪ್ರತಿಭಾವಂತ..! ಆಟ ಆಡೋ ವಯಸ್ಸಲ್ಲೇ ಎಂಥಾ ಸಾಧನೆ ಮಾಡಿಬಿಟ್ಟಿದ್ದಾನೆ..! ಅವನ ಸಾಧನೆ ಏನೆಂಬುದನ್ನು ನಿಮ್ಮಮುಂದೆ ಹೇಳ್ತಾ ಇದ್ದೇನೆ..! ಇವನ ಸ್ಟೋರಿಯನ್ನು ನೀವು ಕೇಳ್ತಾ ಹೋದ್ರೆ ಖಂಡಿತಾ ಮೂಕವಿಸ್ಮಿತರಾಗ್ತೀರ..?!
ನಮ್ಮೆಲ್ಲರನ್ನೂ ಬೆರಗು ಗೊಳಿಸಿರೋ ಆ ಒಂಬತ್ತು ವರ್ಷದ ಪೋರನ ಹೆಸರು `ರೂಬೇನ್ ಪಾಲ್’..! ಈತ ಮೂಲತಃ ನಮ್ಮ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯವನು..! ಇರೋದು ಟೆಕ್ಸಾಸ್ನ ಆಸ್ಟಿಯನ್ನಲ್ಲಿ. ಮೊನ್ನೆ ಮೊನ್ನೆ ಹೊಸದಿಲ್ಲಿಗೆ ಆಗಮಿಸಿದ್ದಾನೆ..! ಕಳೆದ ಗುರುವಾರ ಹೊಸದಿಲ್ಲಿಯಲ್ಲಿ ಏರ್ಪಡಿಸಲಾಗಿದ್ದ `ಸೈಬರ್ ಸೆಕ್ಯುರಿಟಿ’ ತಜ್ಞರ ಸಮಾವೇಶಕ್ಕೆ ವಿಶೇಷ ಉಪನ್ಯಾಸಕನಾಗಿ ಬಂದು..ಉಪನ್ಯಾಸ ಮಾಡಿದ್ದ..! ಈತನ ಮಾತಿನ ಮೋಡಿ, ಶೈಲಿ, ಚಾಕಚಕ್ಯತೆ, ಅಗಾಧ ಜ್ಞಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ಮಂತ್ರಮುಗ್ಧರಾಗಿಬಿಟ್ಟಿದ್ದಾರೆ..! ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಾಗತಿಕ ಸೈಬರ್ ಸಮಾವೇಶದಲ್ಲಿ ಪಾಲ್ಗೊಂಡವರಲ್ಲಿ ಅತ್ಯಂತ ಕಿರಿಯ ಈತನೇ..!
ಹೋದವರ್ಷ ನವೆಂಬರ್ 14ರಂದು ಮಕ್ಕಳದಿನದ ಸಂದರ್ಭದಲ್ಲಿ ಸೈಬರ್ ಸಮ್ಮೇಳನದಲ್ಲಿ ಪ್ರಧಾನ ಆಶಯ ಭಾಷಣವನ್ನು ಮಾಡಿದ್ದ..! ಈಬಾರಿ ಮಕ್ಕಳ ದಿನದಂದು ಮಕ್ಕಳಿಗೆ ಸೈಬರ್ ಸೆಕ್ಯುರಿಟಿಯ ಬಗ್ಗೆ ಪಾಠ ಮಾಡಲಿದ್ದಾನೆ.!
ಸೈಬರ್ ಸೆಕ್ಯುರಿಟಿ ಬಗ್ಗೆ ವಿಶೇಷ ಉಪನ್ಯಾಸ ನೀಡುವುದೆಂದರೆ ನಾವೆಲ್ಲಾ ಮೂರನೇ ಕ್ಲಾಸ್ನಲ್ಲಿ ನಾಲ್ಕನೇ ಕ್ಲಾಸ್ನಲ್ಲಿ ಭಾಷಣ ಮಾಡ್ತಾ ಇದ್ವಲ್ಲಾ..? ಅಷ್ಟು ಸುಲಭವಲ್ಲ…! ಅದು ಶಾಲಾ ಮಟ್ಟದ ಕಾರ್ಯಕ್ರಮ ಅಥವಾ ಸ್ಪರ್ಧೆ ಅಲ್ಲ..! ಆತ ಮಾಡಿದ್ದು ವಿಶೇಷ ಉಪನ್ಯಾಸ..! ಉಪನ್ಯಾಸ ಮಾಡ್ಬೇಕೆಂದ್ರೆ ವಿಷಯದ ಕುರಿತು ಆಳವಾದ ಜ್ಞಾನವಿರಬೇಕಾಗುತ್ತೆ..! ಈ ಹುಡುಗ ಇಷ್ಟೊಂದು ಚಿಕ್ಕವಯಸ್ಸಲ್ಲೇ ಆ ಜ್ಞಾನವನ್ನು ಸಂಪಾದಿಸಿದ್ದಾನಾ..?! ಯಸ್, ಸಂಪಾದಿಸಿದ್ದಾನೆ..! ಇವನೊಬ್ಬ ಅಸಮಾನ್ಯ ಪ್ರತಿಭಾವಂತೆ..! ಈ ವಯಸ್ಸಲ್ಲೇ ಮಕ್ಕಳ ಸೈಬರ್ ಗೇಮ್ಗಳನ್ನು ಸಿದ್ದಪಡಿಸಿ `ಪ್ರೂಡೆಂಟ್ ಗೇಮ್ಸ್’ ಎಂಬ ಕಂಪನಿಗೆ ಸಿಇಒ ಆಗಿಬಿಟ್ಟಿದ್ದಾನೆ..!

ಓ ದೇವರೇ.. ಅವನ ವಯಸ್ಸಲ್ಲಿ ನಮಗೆ ನೆಟ್ಟಗೆ ಶಾಲೆಗೆ ತಯಾರಾಗಿ ಹೋಗಿ ಬರ್ಲಿಕ್ಕೂ ಬರ್ತಾ ಇರ್ಲಿಲ್ಲ..! ಅಮ್ಮನೇ ನಮ್ಮನ್ನು ರೆಡಿ ಮಾಡಿ ಕಳುಹಿಸಬೇಕಿತ್ತು…! ವಯಸ್ಸು ಇಪ್ಪತ್ತೈದಾದರೂ ನಾವು ಕೆಲಸಕ್ಕೆ ಅಲೆಯುತ್ತಿದ್ದೇವೆ..! ಆದರೆ ಈ ಪೋರ ಒಂದು ಕಂಪನಿ ಸಿಇಒ…! ಅಷ್ಟೇ ಅಲ್ಲ.. ಇವನೊಬ್ಬ ಹ್ಯಾಕರ್, ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..! ಅಬ್ಬಾ..ಇವನೆಂಥಾ ಸಾಧಕ..,ಎಂಥಾ ಪ್ರತಿಭಾವಂತ..! ಒಂಬತ್ತನೇ ವಯಸ್ಸಲ್ಲೇ ಎಂಥಾ ಎತ್ತರಕ್ಕೆ ಬೆಳೆದು ಬಿಟ್ಟಿದ್ದಾನೆ..! ಮೂತರ್ಿಚಿಕ್ಕದಾದರೂ ಕೀತರ್ಿ ದೊಡ್ಡದು ಅನ್ನೋ ಮಾತು ಇವನಿಗೆ ಒಪ್ಪುತ್ತೆ ಅಲ್ವೇ..?!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಸಚಿನ್ Vs ವಾರ್ನ್, ಇಂದು ಆಲ್ ಸ್ಟಾರ್ಸ್ ಟಿ20 ಸರಣಿ, ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮ..!

ಇದು ನಮ್ಮ ಕನ್ನಡ…ಇವರು ನಮ್ಮ ಕನ್ನಡಿಗರು..! ಬೆಂಗಳೂರಿನ ಜನರಿಗೆ ಕಿರಿಕ್ ಕೀರ್ತಿ ಪ್ರಶ್ನೆಗಳು..!

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article