No menu items!
21.7 C
Munich
Saturday, May 23, 2026

ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಮತ್ತೊಂದು ಶಾಕ್: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ

Must read

ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಮತ್ತೊಂದು ಶಾಕ್: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ

ನವದೆಹಲಿ: ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 91 ಪೈಸೆಯವರೆಗೆ ಹೆಚ್ಚಳ ಮಾಡಲಾಗಿದ್ದು, ಕಳೆದ 10 ದಿನಗಳಲ್ಲಿ ಇದು ಮೂರನೇ ಬಾರಿಗೆ ದರ ಏರಿಕೆಯಾದಂತಾಗಿದೆ.
ಪರಿಷ್ಕೃತ ದರದ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 87 ಪೈಸೆ ಏರಿಕೆಯಾಗಿ 99.51 ರೂ.ಗೆ ತಲುಪಿದೆ. ಡೀಸೆಲ್ ದರವು 91 ಪೈಸೆ ಹೆಚ್ಚಳವಾಗಿ 92.49 ರೂ. ಆಗಿದೆ.
ಮೇ 15ರಂದು ಇಂಧನ ದರದಲ್ಲಿ ಸುಮಾರು 3 ರೂ. ಏರಿಕೆ ಮಾಡಲಾಗಿತ್ತು. ಬಳಿಕ ಮೇ 19ರಂದು 90 ಪೈಸೆ ಹೆಚ್ಚಳವಾಗಿತ್ತು. ಇದೀಗ ಮತ್ತೆ 91 ಪೈಸೆ ಹೆಚ್ಚಳವಾಗಿರುವುದರಿಂದ ಕಳೆದ ಎರಡು ವಾರಗಳಲ್ಲಿ ಒಟ್ಟು ಸುಮಾರು 5 ರೂ.ವರೆಗೆ ದರ ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್ ದರ:
• ಬೆಂಗಳೂರು – ₹108.09 (+0.95)
• ದೆಹಲಿ – ₹99.51 (+0.87)
• ಕೋಲ್ಕತ್ತಾ – ₹110.64 (+0.94)
• ಮುಂಬೈ – ₹108.49 (+0.90)
• ಚೆನ್ನೈ – ₹105.31 (+0.82)
ಪ್ರಮುಖ ನಗರಗಳಲ್ಲಿನ ಡೀಸೆಲ್ ದರ:
• ಬೆಂಗಳೂರು – ₹95.99 (+0.95)
• ದೆಹಲಿ – ₹92.49 (+0.91)
• ಕೋಲ್ಕತ್ತಾ – ₹97.02 (+0.95)
• ಮುಂಬೈ – ₹95.02 (+0.94)
• ಚೆನ್ನೈ – ₹96.98 (+0.87)
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದೆ. ಭಾರತ ತನ್ನ ತೈಲ ಅವಶ್ಯಕತೆಯ ಸುಮಾರು 85 ശതമಾನವನ್ನು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು ದೇಶೀಯ ಇಂಧನ ದರಗಳ ಮೇಲೆ ನೇರ ಪರಿಣಾಮ ಬೀರುತ್ತಿವೆ.
ಬ್ರೆಂಟ್ ಕಚ್ಚಾ ತೈಲದ ದರವು ಬ್ಯಾರೆಲ್ಗೆ 104 ಡಾಲರ್ ಮೀರಿರುವ ಹಿನ್ನೆಲೆ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶೀಯ ದರಗಳನ್ನು ಪರಿಷ್ಕರಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ.
ಕಳೆದ ಎರಡು ವರ್ಷಗಳಿಂದ ರಷ್ಯಾದ ರಿಯಾಯಿತಿ ದರದ ಕಚ್ಚಾ ತೈಲವನ್ನು ಭಾರತ ಹೆಚ್ಚಾಗಿ ಅವಲಂಬಿಸಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ದರ ಏರಿಕೆಯಾಗುತ್ತಿರುವುದರಿಂದ ಗ್ರಾಹಕರಿಗೆ ಹೆಚ್ಚುವರಿ ಹೊರೆ ಎದುರಾಗುತ್ತಿದೆ. ಇಂಧನ ದರ ಏರಿಕೆ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚುವ ಆತಂಕವನ್ನೂ ಹುಟ್ಟುಹಾಕಿದೆ.

- Advertisement -spot_img

More articles

- Advertisement -spot_img

Latest article