No menu items!
14.3 C
Munich
Tuesday, May 26, 2026

ಜನರಿಗೆ ಮತ್ತೆ ಶಾಕ್: ಪೆಟ್ರೋಲ್, ಡೀಸೆಲ್ ಬಳಿಕ CNG ದರ 2 ರೂ. ಏರಿಕೆ

Must read

ಜನರಿಗೆ ಮತ್ತೆ ಶಾಕ್: ಪೆಟ್ರೋಲ್, ಡೀಸೆಲ್ ಬಳಿಕ ಸಿಎನ್ಜಿ ದರ 2 ರೂ. ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಳಿಕ ಇದೀಗ ನವದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ದರವನ್ನು ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದ ಹೊಸ ದರದ ಪ್ರಕಾರ, ಸಿಎನ್ಜಿ ಬೆಲೆ ಪ್ರತಿ ಕೆಜಿಗೆ 8.09 ರೂ.ಗಳಿಗೆ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿದ್ದು, ಕಳೆದ 12 ದಿನಗಳಲ್ಲಿ ಒಟ್ಟು 6 ರೂ.ಗಳಷ್ಟು ಹೆಚ್ಚಳವಾಗಿದೆ.
ಸಾರಿಗೆ ವಲಯಕ್ಕೆ ಹೆಚ್ಚಿದ ಹೊರೆ
ಸಿಎನ್ಜಿ ದರ ಏರಿಕೆಯಿಂದ ದೆಹಲಿ-ಎನ್ಸಿಆರ್ ಪ್ರದೇಶದ ಆಟೋ, ಟ್ಯಾಕ್ಸಿ, ಶಾಲಾ ವ್ಯಾನ್ ಹಾಗೂ ಖಾಸಗಿ ವಾಹನ ಚಾಲಕರಿಗೆ ಹೆಚ್ಚಿನ ಆರ್ಥಿಕ ಹೊರೆ ಎದುರಾಗಲಿದೆ.
ದೆಹಲಿ ಸಾರಿಗೆ ಒಕ್ಕೂಟಗಳು ಪ್ರಕಾರ, ಈ ಬೆಲೆ ಏರಿಕೆಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಪ್ರಯಾಣ ದರಗಳು ಹಾಗೂ ಸರಕು ಸಾಗಣೆ ದರಗಳು ಹೆಚ್ಚುವ ಸಾಧ್ಯತೆ ಇದೆ.
ಸಿಎನ್ಜಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ದಿನನಿತ್ಯದ ಪ್ರಯಾಣ ವೆಚ್ಚ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

- Advertisement -spot_img

More articles

- Advertisement -spot_img

Latest article