No menu items!
32.7 C
Munich
Wednesday, June 24, 2026

ಪ್ರೀತಿಸಿ ಮದುವೆಯಾಗಲು ಸಜ್ಜಾಗಿದ್ದ ಜೋಡಿ ಲಕ್ನೋ ಅಗ್ನಿ ಅವಘಡದಲ್ಲಿ ಬಲಿ!

Must read

ಪ್ರೀತಿಸಿ ಮದುವೆಯಾಗಲು ಸಜ್ಜಾಗಿದ್ದ ಜೋಡಿ ಲಕ್ನೋ ಅಗ್ನಿ ಅವಘಡದಲ್ಲಿ ಬಲಿ!

ಲಕ್ನೋ: ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದ ಪ್ರೇಮಿ ಜೋಡಿಯ ಬದುಕು ಲಕ್ನೋದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ದುರಂತ ಅಂತ್ಯ ಕಂಡಿದೆ. ಮದುವೆಯ ಕನಸು ಕಟ್ಟಿಕೊಂಡಿದ್ದ ನಿಲೇಶ್ ಕುಮಾರ್ ಮತ್ತು ಅನಾಮಿಕಾ ಸಮಂತಾ ಅವರು ಕೋಚಿಂಗ್ ಸೆಂಟರ್ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಲಿಯಾಗಿದ್ದಾರೆ.
27 ವರ್ಷದ ನಿಲೇಶ್ ಕುಮಾರ್ ಮತ್ತು 30 ವರ್ಷದ ಅನಾಮಿಕಾ ಸಮಂತಾ ಲಕ್ನೋದ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಸಹೋದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ಸ್ಥಳದಲ್ಲೇ ಆರಂಭವಾದ ಸ್ನೇಹ ಕಾಲಕ್ರಮೇಣ ಪ್ರೀತಿಗೆ ತಿರುಗಿದ್ದು, ಇತ್ತೀಚೆಗಷ್ಟೇ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಅವರ ವಿವಾಹ ನಿಶ್ಚಯವಾಗಿತ್ತು.
ಕಳೆದ ವಾರ ಅನಾಮಿಕಾ ಅವರ ಪೋಷಕರು ಪಶ್ಚಿಮ ಬಂಗಾಳದಿಂದ ಲಕ್ನೋಗೆ ಬಂದು ನಿಲೇಶ್ ಕುಟುಂಬವನ್ನು ಭೇಟಿಯಾಗಿದ್ದರು. ಈ ವೇಳೆ ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥವೂ ನೆರವೇರಿತ್ತು. ಮುಂದಿನ ವರ್ಷ ಮದುವೆ ನಡೆಸಲು ಎರಡೂ ಕುಟುಂಬಗಳು ಸಿದ್ಧತೆಗಳನ್ನು ಆರಂಭಿಸಿದ್ದವು.
ಈ ಕುರಿತು ಮಾತನಾಡಿದ ನಿಲೇಶ್ ಅವರ ಸಹೋದರ ಅಭಿಷೇಕ್, ಅನಾಮಿಕಾ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದರು. ನಿಶ್ಚಿತಾರ್ಥದ ಬಳಿಕ ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು. ಮುಂದಿನ ವಾರ ಅನಾಮಿಕಾ ಅವರ ಕುಟುಂಬವನ್ನು ಭೇಟಿಯಾಗಲು ರೈಲು ಟಿಕೆಟ್ ಕೂಡ ಕಾಯ್ದಿರಿಸಲಾಗಿತ್ತು. ಆದರೆ ಒಂದೇ ಕ್ಷಣದಲ್ಲಿ ಎಲ್ಲ ಕನಸುಗಳು ಭಗ್ನಗೊಂಡಿವೆ ಎಂದು ಭಾವುಕರಾಗಿ ಹೇಳಿದ್ದಾರೆ.
ನಿಲೇಶ್ ಅವರಿಗೆ ಇತ್ತೀಚೆಗಷ್ಟೇ ಉದ್ಯೋಗದಲ್ಲಿ ಪ್ರಮೋಷನ್ ಹಾಗೂ ವೇತನ ಹೆಚ್ಚಳ ದೊರೆತಿತ್ತು. ಮದುವೆಗಾಗಿ ಹಣ ಕೂಡಿಡುತ್ತಿದ್ದ ಅವರು ಕುಟುಂಬದ ಹೊಸ ಮನೆ ನಿರ್ಮಾಣ ಕಾರ್ಯಕ್ಕೂ ನೆರವಾಗುತ್ತಿದ್ದರು. ಆ ಹೊಸ ಮನೆಯಲ್ಲೇ ಮದುವೆ ಸಂಭ್ರಮ ನಡೆಸಬೇಕು ಎಂಬುದು ಅವರ ಬಹುಕಾಲದ ಕನಸಾಗಿತ್ತು. ಆದರೆ ವಿಧಿಯಾಟದಿಂದ ಆ ಕನಸು ನನಸಾಗುವ ಮುನ್ನವೇ ಇಬ್ಬರೂ ಸಾವನ್ನಪ್ಪಿದ್ದಾರೆ.
ಸೋಮವಾರ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಿಲೇಶ್ ಮತ್ತು ಅನಾಮಿಕಾ ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹಲವು ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

- Advertisement -spot_img

More articles

- Advertisement -spot_img

Latest article