500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತ್ರ ಕಾಳಧನಿಕರು ತಮ್ಮಲ್ಲಿರೊ ಬ್ಲಾಕ್ ಮನಿನ ವೈಟ್ ಮಾಡ್ಕೊಳೋದು ಹೇಗಪ್ಪಾ ಅಂತ ತಲೆ ಬಿಸಿ ಮಾಡ್ಕೊಂಡಿದ್ರೆ, ಅತ್ತ ಪ್ರಧಾನಿ ಮೋದಿ ಅವರು ಇವರಿಗೆಲ್ಲಾ ಕಪ್ಪು ಹಣ ಘೋಷಿಸಿಕೊಳ್ಳೋಕೆ ಮತ್ತೊಂದು ಚಾನ್ಸ್ ನೀಡಿದ್ದಾರೆ..! ನೋಟ್ ಬ್ಯಾನ್ ನಂತ್ರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬ್ಯಾಂಕ್ ಠೇವಣಿಯಲ್ಲಿರುವ ದಾಖಲೆಗಳಿಲ್ಲದ ಕಪ್ಪು ಹಣ ಘೋಷಿಕೊಂಡಿದ್ದೇ ಆದಲ್ಲಿ ಶೇ.50ರಷ್ಟು ತೆರಿಗೆ ಪಾವತಿ ಮಾಡಿ ಕಪ್ಪು ಹಣ ಬಿಳಿಯಾಗಿಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಿದ್ದಾರೆ. ಬ್ಯಾಂಕ್‍ಗಳಲ್ಲಿ ನೀವು ಠೇವಣಿ ಇಡಲಾದ ದಾಖಲೆಗಳಿಲ್ಲದ ಹಣವನ್ನು ಘೋಷಣೆ ಮಾಡಿಕೊಂಡಿದ್ದೇ ಆದಲ್ಲಿ ಆ ಹಣದ ಮೇಲೆ ಶೇ.50 ರಷ್ಟು ತೆರಿಗೆ ಮತ್ತು ಸರ್ಚಾರ್ಜ್ ವಿಧಿಸಲಾಗತ್ತೆ. ಅಲ್ಲದೇ ಈ ಒಟ್ಟು ಮೊತ್ತದ ಕಾಲು ಭಾಗದಷ್ಟು ಹಣವನ್ನು ನೀವು ನಾಲ್ಕು ವರ್ಷಗಳವರೆಗೆ ಬಳಸುವಂತಿಲ್ಲ. ಆದರೆ ಈ ಹಣಕ್ಕೆ ಯಾವುದೇ ಬಡ್ಡಿ ಸಿಗೊಲ್ಲ ಅಷ್ಟೆ..!
ಇನ್ನು ಕಪ್ಪು ಹಣ ಹೊಂದಿದವರು ಹೇಗೆ ಹಣವನ್ನು ಘೋಷಣೆ ಮಾಡಿಕೊಳ್ಬೇಕು..? ಅದಕ್ಕಾಗಿ ನಾವು ಕಟ್ಟಬೇಕಾದ ತೆರಿಗೆಯಾದ್ರೂ ಯಾವುದು.? ಒಂದು ವೇಳೆ ತೆರಿಗೆ ಕಟ್ಟಬೇಕಾದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಬೇಕೇ..? ಅಥವಾ ಕಂತುಗಳಲ್ಲೋ..? ಅಲ್ಲದೇ ಕಪ್ಪು ಹಣ ಘೋಷಿಸಿಕೊಳ್ಳೋಕೆ ಇರುವ ಕೊನೆಯ ದಿನಾಂಕವಾದ್ರೂ ಯಾವಾಗ..? ಎಂಬೆಲ್ಲಾ ಪ್ರಶ್ನೆಗಳಿಗೆ ಈ ಅಧಿಸೂಚನೆಯಲ್ಲಿ ಸ್ಪಷ್ಟತೆ ನೀಡಿದ್ದಾರೆ. ಇನ್ನೊಂದು ಸಂಗತಿ ಅಂದ್ರೆ ಕಪ್ಪು ಹಣ ಘೋಷಿಸಿಕೊಳ್ಳುವವರಿಗೆ ಆದಾಯ ಮೂಲ ಯಾವುದು ಎಂಬೆಲ್ಲಾ ಪ್ರಶ್ನೆಗಳು ಕೇಳುವುದಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸುವ ಸಾಧ್ಯತೆಯೂ ಇದೆ..!
ಈ ಯೋಜನೆಯಡಿಯಲ್ಲಿ ಕಪ್ಪು ಹಣ ಘೋಷಿಸಿಕೊಂಡವರಿಗೆ ಸಿವಿಲ್ ಕಾನೂನು, ತೆರಿಗೆ ಹಾಗೂ ಇತರೆ ತೆರಿಗೆ ಸಂಬಂಧಿ ಕಾಯ್ದೆಗಳಿಂದ ವಿನಾಯಿತಿ ಸಿಗಲಿದೆ. ಆದರೆ ವಿದೇಶಿ ವಿನಿಮಯ ಕಾಯ್ದೆ (ಫೆಮಾ) ಅಕ್ರಮ ಹಣ ವರ್ಗಾವಣಾ ಕಾಯ್ದೆ (ಪಿಎಂಎಲ್‍ಎ) ನಾರ್ಕೋಟಿಕ್ಸ್ ಹಾಗೂ ಕಪ್ಪು ಹಣ ಕಾಯ್ದೆಯಡಿ ವಿನಾಯಿತಿ ಲಭಿಸೋದಿಲ್ಲ.
ಕಂದಾಯ ಇಲಾಖೆ ಈ ವಾರದ ಅಂತ್ಯದೊಳಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ 2016ರ ಅಧಿಸೂಚನೆಯನ್ನು ಹೊರಡಿಸಲಿದ್ದು ನವೆಂಬರ್ 29ರಂದು ಲೋಕ ಸಭೆಯಲ್ಲಿ ಅಂಗೀಕೃತವಾಗಲಿದೆ. ಲೋಕ ಸಭೆಯಲ್ಲಿ ಅಂಗೀಕೃತವಾದ ಮಸೂದೆಯನ್ನು ರಾಜ್ಯ ಸಭೆಯಲ್ಲಿ ತಿರಸ್ಕರಿಸುವಂತಿಲ್ಲ. ಹಣಕಾಸು ಮಸೂದೆಯನ್ನು ರಾಜ್ಯ ಸಭೆಗೆ ಕಳಿಸಿದ 14 ದಿನಗಳೊಳಗಾಗಿ ಅದನ್ನು ಹಿಂದಿರುಗಿಸಬೇಕು. ನಂತರ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳಿಸಲಾಗುತ್ತದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್
ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!
ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?
ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?