ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್

Must read

ನಟ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ವೇಳೆ ದುರಂತ ಅಂತ್ಯ ಕಂಡ ಸ್ಯಾಂಡಲ್‍ವುಡ್‍ನ ಇಬ್ಬರು ಉದಯೋನ್ಮುಖ ಪ್ರತಿಭೆಗಳಾದ ಅನಿಲ್ ಮತ್ತು ಉದಯ್ ಅವರ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ಯಶ್ ನೆರವಾಗಿದ್ದಾರೆ..! ಈಗಾಗಲೇ ಯಶೋಮಾರ್ಗ ಫೌಂಡೇಶನ್ ಮೂಲಕ ರೈತರು, ಬಡಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಯಶ್, ಇದೀಗ ತಮ್ಮ ಸಿನಿಮಾಗಳಲ್ಲಿ ಸಹ ನಟರಾಗಿ ಕಾಣಿಸಿಕೊಂಡಿದ್ದ ಕಲಾವಿದರ ಕುಟುಂಬಳಿಗೆ ಸಹಾಯಹಸ್ತ ನೀಡಲು ಮುಂದೆ ಬಂದಿದ್ದಾರೆ. ಕಳೆದ ನವೆಂಬರ್ 7 ರಂದು ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದ ವೇಳೆ ಹೆಲಿಕ್ಯಾಪ್ಟರ್‍ನಿಂದ ನೀರಿಗೆ ಧುಮುಕಬೇಕಾಗಿದ್ದ ದೃಶ್ಯ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ವಿಧಿವಶರಾಗಿದ್ದರು. ಈ ಘಟನೆ ನಡೆದ ನಂತರ ಇಡೀ ಸ್ಯಾಂಡಲ್‍ವುಡ್ ಚಿತ್ರ ತಂಡ ಇಬ್ಬರು ಕುಟುಂಬಗಳಿಗೆ ನೆರವಾಗಿದ್ದರು. ಅದೇ ರೀತಿ ಯಶ್ ಕೂಡ ನೆರವಿನ ಹಸ್ತ ಚಾಚಿದ್ದಾರೆ. ಯಶ್ ಅವರ ಸಾರಥ್ಯದಲ್ಲಿ ಸ್ಥಾಪನೆಯಾಗಿರುವ ಯಶೋಮಾರ್ಗ ಫೌಂಡೇಶನ್ ಮೂಲಕ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ಒಟ್ಟು 6.5 ಲಕ್ಷ ರೂ. ಸಹಾಯ ಧನ ನೀಡಿದ್ದಾರೆ. ಇನ್ನು ಅನಿಲ್ ಅವರ ಇಬ್ಬರು ಮಕ್ಕಳಿಗೆ ಯಶೋಮಾರ್ಗ ಫೌಂಡೇಶನ್ ವತಿಯಿಂದ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ಬಾಂಡ್ ನೀಡಿದ್ದಾರೆ. ಉದಯ್ ತಾಯಿಗೆ ತಮ್ಮ ಫೌಂಡೇಶನ್ ಮೂಲಕ 1.5 ಲಕ್ಷ ರೂ ಚೆಕ್ ನೀಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

- Advertisement -spot_img

More articles

- Advertisement -spot_img

Latest article