ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ಮುದ್ರೆ; 20 ಶಾಸಕರಿಗೆ ಸಚಿವ ಸ್ಥಾನ, ಇಂದು ಸಂಜೆ ಪ್ರಮಾಣವಚನ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಹೊಸ ಸದಸ್ಯರ ಸೇರ್ಪಡೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಒಪ್ಪಿಗೆ ನೀಡಿದೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ನವದೆಹಲಿದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಹುಲ್ ಗಾಂಧಿ, ರಂದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದ್ದಾರೆ.
ಇದೇ ವೇಳೆ, ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಸ್ಪೀಕರ್ ಹುದ್ದೆಗೆ ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಹೈಕಮಾಂಡ್ ಟಿ.ಬಿ. ಜಯಚಂದ್ರ ಅವರನ್ನು ಆಯ್ಕೆ ಮಾಡಿದೆ.
ಸಚಿವ ಸ್ಥಾನಕ್ಕೆ ಅವಕಾಶ ಪಡೆದಿರುವ ಸಂಭಾವ್ಯ ನಾಯಕರು
• ಚೆಲುವರಾಯಸ್ವಾಮಿ
• ಬಾಲಕೃಷ್ಣ
• ರುದ್ರಪ್ಪ ಲಮಾಣಿ
• ಎ.ಎಸ್. ಪೊನ್ನಣ್ಣ
• ಜಮೀರ್ ಅಹ್ಮದ್ ಖಾನ್
• ರಿಜ್ವಾನ್ ಅರ್ಷದ್
• ನರೇಂದ್ರಸ್ವಾಮಿ
• ಶಿವರಾಜ್ ತಂಗಡಗಿ
• ಲಕ್ಷ್ಮಣ ಸವದಿ
• ವಿಜಯಾನಂದ ಕಾಶಪ್ಪನವರ್
• ಗಾಯತ್ರಿ ಶಾಂತೇಗೌಡ
• ಮಧು ಬಂಗಾರಪ್ಪ
• ಸಂತೋಷ್ ಲಾಡ್
• ಬಿ. ನಾಗೇಂದ್ರ
• ಅಜಯ್ ಸಿಂಗ್
• ಮಂಕಾಳ ವೈದ್ಯ
• ಪುಟ್ಟರಂಗಶೆಟ್ಟಿ
ಸಚಿವ ಸಂಪುಟ ವಿಸ್ತರಣೆಯೊಂದಿಗೆ ಸರ್ಕಾರದ ಆಡಳಿತಕ್ಕೆ ಮತ್ತಷ್ಟು ಬಲ ಸಿಗುವ ನಿರೀಕ್ಷೆ ವ್ಯಕ್ತವಾಗಿದ್ದು, ನೂತನ ಸಚಿವರಿಗೆ ಯಾವ ಖಾತೆಗಳು ಹಂಚಿಕೆಯಾಗಲಿವೆ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.



