No menu items!
16.5 C
Munich
Saturday, October 3, 2026

ಭಾರತೀಯ ಕ್ಯಾಪ್ಟನ್ ಮೇಲೆ ದಾಳಿ ಮಾಡಿದ್ದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಗುರುತು ಬಹಿರಂಗ!

Must read

ಭಾರತೀಯ ಕ್ಯಾಪ್ಟನ್ ಮೇಲೆ ದಾಳಿ ಮಾಡಿದ್ದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಗುರುತು ಬಹಿರಂಗ!

ದುಬೈ/ಜೆರುಸಲೇಂ: ದುಬೈ-ಟೆಲ್ ಅವೀವ್ ಮಾರ್ಗದ ವಿಮಾನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಭೀಕರ ದಾಳಿ ನಡೆಸಿ, ವಿಮಾನವನ್ನು ಹೈಜಾಕ್ ಮಾಡಲು ಹಾಗೂ ಹಾನಿಗೊಳಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಫ್ಲೈದುಬೈ (Flydubai) ಸಂಸ್ಥೆಯ ಸಹ-ಪೈಲಟ್ನ ಗುರುತು ಹಾಗೂ ಬೆಚ್ಚಿ ಬೀಳಿಸುವ ಹಿನ್ನೆಲೆ ಬಹಿರಂಗವಾಗಿದೆ.
ದಾಳಿ ನಡೆಸಿದ ಶಂಕಿತ ಸಹ-ಪೈಲಟ್ನನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ ಎಂದು ಅಮೆರಿಕ ಹಾಗೂ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲಿ ಅಧಿಕಾರಿಗಳು ದೃಢಪಡಿಸಿರುವ ಮಾಹಿತಿಯ ಪ್ರಕಾರ, ಹಮಾಮ್ ಅಲ್-ಹಮ್ಮಾಮಿ ಯುಎಇಯಲ್ಲಿ ಒಮಾನ್ ಮೂಲದ ತಂದೆ ಹಾಗೂ ಸಿರಿಯಾ ಮೂಲದ ತಾಯಿಗೆ ಜನಿಸಿದ್ದನು. ಈತ ತನ್ನ ಜೀವನದ ಬಹುಪಾಲು ವರ್ಷಗಳನ್ನು ಯುಎಇಯಲ್ಲೇ ಕಳೆದಿದ್ದನು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಈತ “ಇಸ್ಲಾಮಿಸ್ಟ್ ಮೂಲಭೂತವಾದಿ ವಿಚಾರಧಾರೆಗೆ ಸಂಪೂರ್ಣವಾಗಿ ಒಳಗಾಗಿದ್ದ” ಎಂದು ಸ್ಪಷ್ಟಪಡಿಸಿದ್ದಾರೆ.
ಈತನಿಗೆ ಆಮೂಲಾಗ್ರ ತೀವ್ರಗಾಮಿ ವಿಚಾರಧಾರೆ ಇದ್ದ ಬಗ್ಗೆ ತೀವ್ರ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ಕಳೆದ ವರ್ಷ ಒಮಾನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ‘ಒಮಾನ್ ಏರ್’ ನಿಂದ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಒಮಾನ್ ಏರ್ನಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ್ದ ಈತ, ಬಳಿಕ ರಾಯಲ್ ಏರ್ ಮರೋಕ್ ಮತ್ತು ಕಳೆದ 8 ತಿಂಗಳಿನಿಂದ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದನು.
ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ಹಮಾಮ್ ಅಲ್-ಹಮ್ಮಾಮಿ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟವಾದ ಪೋಸ್ಟ್ಗಳು ವಿಮಾನಯಾನ ಕ್ಷೇತ್ರವನ್ನೇ ಆತಂಕಕ್ಕೀಡುಮಾಡಿವೆ. ಈ ಪೋಸ್ಟ್ಗಳ ಪೈಕಿ ಬೋಯಿಂಗ್ 737 MAX 8 ವಿಮಾನದ ಕಾಕ್ಪಿಟ್ನಲ್ಲಿ ಚಿತ್ರೀಕರಿಸಲಾದ ವಿಡಿಯೊ ಒಂದಿದ್ದು, ಅದರಲ್ಲಿ ಇಸ್ರೇಲಿ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ಜೂಮ್ ಮಾಡಿ ತೋರಿಸಲಾಗಿತ್ತು.
ಇನ್ನೂ ಆತಂಕಕಾರಿ ಸಂಗತಿಯೆಂದರೆ, ಈ ವಿಡಿಯೊದ ಕೊನೆಯಲ್ಲಿ ಅಲ್-ಖೈದಾ ಮಾಜಿ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹಾಗೂ 2009ರಲ್ಲಿ ಅಮೆರಿಕದ ಸಿಐಎ (CIA) ಅಧಿಕಾರಿಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಅಲ್-ಖೈದಾ ಉಗ್ರ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಫೋಟೊಗಳನ್ನು ಲಗತ್ತಿಸಲಾಗಿತ್ತು.
ಮತ್ತೊಂದು ಪೋಸ್ಟ್ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳಾದ ಮೆಕ್ಕಾ, ಮದೀನಾ ಮತ್ತು ಜೆರುಸಲೇಂಗಳನ್ನು ಸಂಪರ್ಕಿಸುವ ಎಐ (AI) ಸೃಷ್ಟಿತ ಚಿತ್ರವನ್ನು ಪ್ರಕಟಿಸಲಾಗಿತ್ತು. ಇಂಗ್ಲೆಂಡ್ನ ಬಕಿಂಗ್ಹ್ಯಾಮ್ಶೈರ್ ನ್ಯೂ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದ ಈತನ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಕುರಿತು ಯುಎಇ ಹಾಗೂ ಇಸ್ರೇಲ್ ಭದ್ರತಾ ಸಂಸ್ಥೆಗಳು ಜಂಟಿ ತನಿಖೆ ನಡೆಸುತ್ತಿವೆ.

- Advertisement -spot_img

More articles

- Advertisement -spot_img

Latest article