No menu items!
24.2 C
Munich
Wednesday, August 5, 2026

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ: ಬ್ರ್ಯಾಂಡ್ ಅಂಬಾಸಿಡರ್ ಆಗಿ ಮೋಹಕತಾರೆ ರಮ್ಯಾ ಆಯ್ಕೆ

Must read

ಮಹಿಳೆಯರ ಆರೋಗ್ಯದ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ. ಬಹುತೇಕ ಮುಕ್ತವಾಗಿ ಚರ್ಚೆಯಾಗದ, ಆದರೆ ಪ್ರತಿ ಮಹಿಳೆಯೂ ಅನುಭವಿಸುವ ‘ಋತುಬಂಧ’ ಅಂದರೆ ಮೆನೋಪಾಸ್ ಸಮಸ್ಯೆಗಳ ಬಗ್ಗೆ ಈಗ ಅಧಿಕೃತವಾಗಿ ಧ್ವನಿ ಎತ್ತಲಾಗಿದೆ. ಈ ಗಂಭೀರ ಆರೋಗ್ಯ ಸಮಸ್ಯೆಗೆ ಕರಾರುವಾಕ್ ಪರಿಹಾರ ನೀಡಲು ರಾಜ್ಯ ಸರ್ಕಾರ ದೇಶದಲ್ಲೇ ಪ್ರಥಮ ಬಾರಿಗೆ ‘ಋತುತಾರೆ’ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ.

ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ ಮಹಿಳೆಯರನ್ನು ಕಾಡುತ್ತಿರುವ ಹಾರ್ಮೋನ್ ಬದಲಾವಣೆಗಳು ಮತ್ತು ಮಾನಸಿಕ ಒತ್ತಡದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಮಹಿಳೆಯರ ಆರೋಗ್ಯಕ್ಕಾಗಿ ವಿಶೇಷ ನೀತಿ ರೂಪಿಸುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ‘ಋತುತಾರೆ’ ಅಥವಾ ‘ಋತುಬಂಧ’ ಪಾಲಿಸಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರ ಜೀವನಶೈಲಿ, ಆಹಾರ ಪದ್ಧತಿ ಹಾಗೂ ನಿದ್ರೆಯ ಗುಣಮಟ್ಟದ ಕುರಿತು ವೈಜ್ಞಾನಿಕ ಮಾರ್ಗದರ್ಶನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ರೂಪುರೇಷೆಗಾಗಿ ಡಾ. ಜೋತ್ಸ್ನಾ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಮಹಿಳೆಯರಲ್ಲಿ ಯಾವ ವಯಸ್ಸಿನಲ್ಲಿ ಋತುಬಂಧ ಉಂಟಾಗುತ್ತದೆ, ಇದು ಸಹಜವಾಗಿದೆಯೇ ಅಥವಾ ಶಸ್ತ್ರಚಿಕಿತ್ಸೆಯಿಂದ ಆಗಿದೆಯೇ ಎಂಬುದನ್ನು ಕೂಲಂಕಷವಾಗಿ ಅಧ್ಯಯನ ಮಾಡಲಿದೆ. ಅತಿಯಾದ ಜಂಕ್ ಫುಡ್ ಸೇವನೆ ಹಾಗೂ ಒತ್ತಡದ ಬದುಕಿನಿಂದಾಗಿ ಈ ಸಮಸ್ಯೆಗಳು ಹೇಗೆ ಉಲ್ಬಣಿಸುತ್ತಿವೆ ಎಂಬುದರ ಬಗ್ಗೆಯೂ ವರದಿ ತಯಾರಾಗಲಿದೆ.

ಇದಲ್ಲದೆ, ಯೋಜನೆಗೆ ತಳಮಟ್ಟದಿಂದಲೇ ಜೀವ ತುಂಬಲು ಆಶಾ ಕಾರ್ಯಕರ್ತೆಯರು ನೇರವಾಗಿ ರಂಗಕ್ಕಿಳಿಯಲಿದ್ದಾರೆ. ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ನಡೆಸಿ ಮಹಿಳೆಯರ ಆರೋಗ್ಯದ ಡೇಟಾ ಕಲೆಹಾಕಲಾಗುತ್ತದೆ. ಪ್ರೀ-ಮೆನೋಪಾಸ್ ಹಾಗೂ ಪೋಸ್ಟ್-ಮೆನೋಪಾಸ್ ಹಂತದಲ್ಲಿ ಮಹಿಳೆಯರು ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತದೆ.

ಈ ಇಡೀ ಅಭಿಯಾನಕ್ಕೆ ಕಳೆ ತರಲು ಜನಪ್ರಿಯ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಮೆನೋಪಾಸ್ ಬಗ್ಗೆ ಸಮಾಜದಲ್ಲಿ ಇಂದಿಗೂ ಇರುವ ಮುಜುಗರ ಹಾಗೂ ಜಾಗೃತಿಯ ಕೊಮ್ಮೆಯನ್ನು ದೂರ ಮಾಡಲು ಈ ಹೆಜ್ಜೆ ಸಹಕಾರಿಯಾಗಲಿದೆ. ಕೇವಲ ಮನವಿ ಸಲ್ಲಿಸಲು ಬಂದಿದ್ದ ತನಗೆ ಸರ್ಕಾರ ಈ ದೊಡ್ಡ ಜವಾಬ್ದಾರಿ ನೀಡಿರುವುದು ಖುಷಿ ತಂದಿದೆ ಎಂದು ರಮ್ಯಾ ಕೂಡ ಸಂತಸ ಹಂಚಿಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article