No menu items!
18.7 C
Munich
Saturday, August 8, 2026

ತುಂಗಭದ್ರಾ ಜಲಾಶಯ ಭರ್ತಿಯತ್ತ; 72 ಟಿಎಂಸಿ ದಾಟಿದ ನೀರು ಸಂಗ್ರಹ, ಭಾರೀ ಒಳಹರಿವು ಮುಂದುವರಿಕೆ

Must read

ತುಂಗಭದ್ರಾ ಜಲಾಶಯ ಭರ್ತಿಯತ್ತ; 72 ಟಿಎಂಸಿ ದಾಟಿದ ನೀರು ಸಂಗ್ರಹ, ಭಾರೀ ಒಳಹರಿವು ಮುಂದುವರಿಕೆ

ವಿಜಯನಗರ: ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಮುಂದುವರಿದಿದ್ದು, ಜಲಾಶಯ ಭರ್ತಿಯತ್ತ ಸಾಗುತ್ತಿದೆ. ಸದ್ಯ ಜಲಾಶಯಕ್ಕೆ 40,750 ಕ್ಯುಸೆಕ್ ನೀರು ಒಳಹರಿವಿದೆ.
ಕಳೆದ 24 ಗಂಟೆಗಳಲ್ಲಿ ಜಲಾಶಯಕ್ಕೆ ಸರಾಸರಿ 42,114 ಕ್ಯುಸೆಕ್ ನೀರು ಹರಿದುಬಂದಿದೆ. ಪರಿಣಾಮ ಜಲಾಶಯದ ನೀರಿನ ಮಟ್ಟ 1,623.68 ಅಡಿಗೆ ಏರಿಕೆಯಾಗಿದ್ದು, ಸದ್ಯ 72.264 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಆಗಿದೆ. ಇನ್ನು ತುಂಗಾ ನದಿಯಿಂದಲೂ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಸದ್ಯ 32,247 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಒಟ್ಟು 1,514 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಎಲ್ಎಲ್ಸಿ ಮೂಲಕ ಕರ್ನಾಟಕ–ಆಂಧ್ರ ಗಡಿ ಭಾಗಕ್ಕೆ 481 ಕ್ಯುಸೆಕ್ ಹಾಗೂ ಎಲ್ಎಲ್ಸಿ ಟಿಬಿ ಬೋರ್ಡ್ ಗಡಿಗೆ 320 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 1,626.06 ಅಡಿ ಇದ್ದರೆ, ನೀರಿನ ಸಂಗ್ರಹ 80.003 ಟಿಎಂಸಿ ಇತ್ತು. ಸದ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಮತ್ತು ಸಂಗ್ರಹದಲ್ಲಿ ವ್ಯತ್ಯಾಸ ಕಂಡುಬಂದರೂ, ಉತ್ತಮ ಒಳಹರಿವು ಮುಂದುವರಿದಿರುವುದು ಜಲಾಶಯದ ಭರ್ತಿಯ ನಿರೀಕ್ಷೆ ಮೂಡಿಸಿದೆ.
ಮುಂದಿನ ದಿನಗಳಲ್ಲೂ ಇದೇ ರೀತಿಯ ಒಳಹರಿವು ಮುಂದುವರಿದರೆ ತುಂಗಭದ್ರಾ ಜಲಾಶಯ ಶೀಘ್ರದಲ್ಲೇ ಮತ್ತಷ್ಟು ಭರ್ತಿಯಾಗುವ ಸಾಧ್ಯತೆ ಇದೆ.

- Advertisement -spot_img

More articles

- Advertisement -spot_img

Latest article