No menu items!
30.1 C
Munich
Wednesday, August 12, 2026

ಕರ್ನಾಟಕ ಬಂದ್‌ ಎಲ್ಲದಕ್ಕೂ ಪರಿಹಾರವಲ್ಲ, ಕೊನೆಯ ಅಸ್ತ್ರವಾಗಬೇಕು: ಹೋರಾಟಕ್ಕೆ ಕರೆ ನೀಡಿದ ಕರವೇ ಸ್ವಾಭಿಮಾನಿ ಸೇನೆ

Must read

ಕರ್ನಾಟಕ ಬಂದ್‌ ಎಲ್ಲದಕ್ಕೂ ಪರಿಹಾರವಲ್ಲ, ಕೊನೆಯ ಅಸ್ತ್ರವಾಗಬೇಕು: ಹೋರಾಟಕ್ಕೆ ಕರೆ ನೀಡಿದ ಕರವೇ ಸ್ವಾಭಿಮಾನಿ ಸೇನೆ

ಬೆಂಗಳೂರು: ನಾಳಿನ ಕರ್ನಾಟಕ ಬಂದ್‌ ಕರೆ ಕೊಟ್ಟಿರುವ ಹಿನ್ನೆಲೆ ಬಂದ್‌ ಗೆ ಯಾವುದೇ ಬೆಂಬಲ ಇಲ್ಲ ಎಂದ ಕರವೇ ಸ್ವಾಭಿಮಾನಿ ಸೇನೆ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ನಿಂಗರಾಜು ಗೌಡ ಮಾತನಾಡಿದ್ದು,

ಕರ್ನಾಟಕ ಬಂದ್‌ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ. ಯಾವುದೇ ವಿಚಾರದಲ್ಲಿ ಬಂದ್‌ ಅನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಂದ್‌ ಕೈಬಿಟ್ಟು, ಕಾವೇರಿ ನೀರಿನ ವಿಚಾರದಲ್ಲಿ ಪರಿಣಾಮಕಾರಿ ಹೋರಾಟ ನಡೆಸುವತ್ತ ಗಮನಹರಿಸುವಂತೆ ನಿಂಗರಾಜು ಗೌಡ ಕರೆ ನೀಡಿದ್ದಾರೆ.

ಕಾವೇರಿ ವಿಚಾರದಲ್ಲಿ ನಡೆಯುವ ಹೋರಾಟಕ್ಕೆ ಕರವೇ ಸ್ವಾಭಿಮಾನಿ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲೂ ಕಾವೇರಿ ನೀರಿನ ಹೋರಾಟಕ್ಕೆ ಬೆಂಬಲ ನೀಡಲು ಸಿದ್ಧವಿದ್ದೇವೆ, ಆದರೆ ಕರ್ನಾಟಕ ಬಂದ್‌ಗೆ ಮಾತ್ರ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕಾವೇರಿ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಒತ್ತಾಯಿಸಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಹೋರಾಟ ನಡೆಸುವಂತೆ ಸಂಘಟನೆ ಕರೆ ನೀಡಿದೆ.

ಹೀಗಾಗಿ ಕರವೇ ಸ್ವಾಭಿಮಾನಿ ಸೇನೆಯ ನಿಲುವು ಸ್ಪಷ್ಟವಾಗಿದ್ದು, ‘ಕರ್ನಾಟಕ ಬಂದ್‌ಗೆ ನೋ, ಕಾವೇರಿ ಹೋರಾಟಕ್ಕೆ ಯೆಸ್’ ಎಂಬ ಸಂದೇಶವನ್ನು ಸಂಘಟನೆ ನೀಡಿದೆ.

- Advertisement -spot_img

More articles

- Advertisement -spot_img

Latest article