No menu items!
15.9 C
Munich
Saturday, September 12, 2026

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಪೆನ್‌ʼಡ್ರೈವ್ ಸೀಕ್ರೆಟ್ ಬಯಲು: 100 ಅಶ್ಲೀಲ ವೀಡಿಯೋ ಪತ್ತೆ

Must read

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಪೆನ್‌ʼಡ್ರೈವ್ ಸೀಕ್ರೆಟ್ ಬಯಲು: 100 ಅಶ್ಲೀಲ ವೀಡಿಯೋ ಪತ್ತೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಹಸ್ಯವಾಗಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಬಳಸಿ ಸಿಕ್ಕಿಬಿದ್ದಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿಯಿದ್ದ ಪೆನ್‌ಡ್ರೈವ್‌ನ ಸತ್ಯಾಸತ್ಯತೆ ಇದೀಗ ಎಫ್‌ಎಸ್‌ಎಲ್ (FSL) ವರದಿಯಿಂದ ಬಹಿರಂಗವಾಗಿದೆ. ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವೀಡಿಯೋಗಳು ಇರುವುದು ದೃಢಪಟ್ಟಿದ್ದು, ಕೈದಿಗಳ ಬ್ಯಾರಕ್‌ನಲ್ಲಿ ಅಳವಡಿಸಲಾಗಿದ್ದ ಟಿವಿಗೆ ಈ ಪೆನ್‌ಡ್ರೈವ್ ಹಾಕಿ ಪ್ರಜ್ವಲ್ ವೀಡಿಯೋಗಳನ್ನು ವೀಕ್ಷಿಸುತ್ತಿದ್ದರು ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.

ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿದ್ದ ಒಟ್ಟು 173 ಫೈಲ್‌ಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಮೊಬೈಲ್‌ನಲ್ಲಿ ಕೇವಲ ಚಲನಚಿತ್ರಗಳು ಹಾಗೂ ವೆಬ್ ಸೀರೀಸ್‌ಗಳು ಮಾತ್ರ ಪತ್ತೆಯಾಗಿವೆ. ಆದರೆ, ಪೆನ್‌ಡ್ರೈವ್‌ನಲ್ಲಿ 100 ಅಶ್ಲೀಲ ವೀಡಿಯೋಗಳು ಇರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಪೆನ್‌ಡ್ರೈವ್ ಅನ್ನು ಜೈಲಿನಲ್ಲಿ ಯಾವ ಸಮಯ ಹಾಗೂ ದಿನಾಂಕಗಳಲ್ಲಿ ಬಳಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮತ್ತೆ ಎಫ್‌ಎಸ್‌ಎಲ್ ತಜ್ಞರ ಸಹಾಯ ಕೋರಿದ್ದಾರೆ.

ಕಳೆದ ಆಗಸ್ಟ್ 11ರಂದು ಸಿಸಿಬಿ (CCB) ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಡೆಸಿದ ದಿಢೀರ್ ದಾಳಿಯ ವೇಳೆ, ಪ್ರಜ್ವಲ್ ರೇವಣ್ಣ ಅವರ ಸಹಕೈದಿ ಪ್ರತಾಪ್ ರಾಯ್ ಅವರ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದವು. ಈ ಅಕ್ರಮದ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಜಫ್ತಿ ಮಾಡಿದ ಸಾಧನಗಳನ್ನು ವೈಜ್ಞಾನಿಕ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದರು.

- Advertisement -spot_img

More articles

- Advertisement -spot_img

Latest article