No menu items!
15.4 C
Munich
Friday, September 18, 2026

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ: ಸಚಿವ ರುದ್ರಪ್ಪ ಲಮಾಣಿಗೆ ಗಣಿ ಇಲಾಖೆಯಿಂದ ₹3 ಕೋಟಿ ದಂಡ!

Must read

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ: ಸಚಿವ ರುದ್ರಪ್ಪ ಲಮಾಣಿಗೆ ಗಣಿ ಇಲಾಖೆಯಿಂದ ₹3 ಕೋಟಿ ದಂಡ!

ಹಾವೇರಿ: ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ ಹಾಗೂ ಜಾಗ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ₹3 ಕೋಟಿ ರೂಪಾಯಿ ಭಾರಿ ದಂಡ ವಿಧಿಸಿದೆ.
ಡ್ರೋಣ್ ಸಮೀಕ್ಷೆಯಲ್ಲಿ ಬಯಲಾಯ್ತು ನಿಯಮ ಉಲ್ಲಂಘನೆ: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹುಣಸಿಕಟ್ಟಿ ಬಳಿಯ ಕಲ್ಲು ಕ್ವಾರಿಯ ಮಾಲೀಕರಾಗಿರುವ ಸಚಿವ ರುದ್ರಪ್ಪ ಲಮಾಣಿ ಅವರು ಜಾಗ ಒತ್ತುವರಿ ಮಾಡಿ ಕಲ್ಲು ತೆಗೆದು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಗಳ ಕೇಂದ್ರ (KSRSAC) ಡ್ರೋಣ್ ಮೂಲಕ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಪರವಾನಗಿ ನಿಯಮ ಮೀರಿ ಅಕ್ರಮ ಎಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಈ ಪೈಕಿ ಸಚಿವ ರುದ್ರಪ್ಪ ಲಮಾಣಿ ಅವರೂ ಸೇರಿದ್ದಾರೆ.
6 ತಿಂಗಳ ಗಡುವು, 3 ಕಂತುಗಳಲ್ಲಿ ದಂಡ ಪಾವತಿಸಲು ಸೂಚನೆ: ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಇಲಾಖೆಯು ಸಚಿವ ರುದ್ರಪ್ಪ ಲಮಾಣಿ ಅವರಿಗೆ ಅಧಿಕೃತ ನೋಟಿಸ್ ಜಾರಿಗೊಳಿಸಿದ್ದು, 6 ತಿಂಗಳ ಗಡುವಿನೊಳಗೆ 3 ಕಂತುಗಳಲ್ಲಿ ₹3 ಕೋಟಿ ದಂಡವನ್ನು ಪಾವತಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
“ಸಿಎಂ ಬಳಿ ಮಾತನಾಡಲು ಸಚಿವರಿಗೆ ಧೈರ್ಯವಿಲ್ಲ”: ಸಚಿವರಿಗೇ ದಂಡ ವಿಧಿಸಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಕ್ರಷರ್ ಮತ್ತು ಕ್ವಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಬೆಳವಡಿ, “ಸಚಿವ ರುದ್ರಪ್ಪ ಲಮಾಣಿಯವರಿಗೆ 3 ಕೋಟಿ ರೂಪಾಯಿ ದಂಡ ಬಂದಿದೆ. ಆದರೆ, ಅವರು ಮಂತ್ರಿಯಾಗಿದ್ದರೂ ಈ ವಿಷಯವಾಗಿ ಸಿಎಂ ಬಳಿ ಹೋಗಿ ಮಾತನಾಡಲು ಧೈರ್ಯ ತೋರುತ್ತಿಲ್ಲ. ನಾವೆಲ್ಲರೂ ಹೋರಾಟ ನಡೆಸಿದಾಗ ಮಾತ್ರ ಅವರು ಮುಂಚೂಣಿಗೆ ಬರುತ್ತಾರೆ. ‘ಹೋಗಯ್ಯಾ ದಂಡ ತುಂಬು, ನಿನಗೇನು ಕಡಿಮೆ ಆಗಿದೆ’ ಎಂದು ಹೇಳುತ್ತಿದ್ದು, ತಮಗಾದ ಅನ್ಯಾಯದ ವಿರುದ್ಧ ಸಚಿವರೇ ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article