No menu items!
7.7 C
Munich
Friday, September 25, 2026

ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಹಲ್ಲೆ: ಗಂಭೀರ ಗಾಯಗೊಂಡಿದ್ದ ಡಾಬಾ ಮಾಲೀಕ ಸಾವು

Must read

ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಹಲ್ಲೆ: ಗಂಭೀರ ಗಾಯಗೊಂಡಿದ್ದ ಡಾಬಾ ಮಾಲೀಕ ಸಾವು

ಬಾಗಲಕೋಟೆ: ಊಟ ಖಾಲಿಯಾಗಿದೆ ಎಂದು ಹೇಳಿದ್ದಕ್ಕೆ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಡಾಬಾ ಮಾಲೀಕರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಗದ್ದನಕೇರಿ ಕ್ರಾಸ್ ಬಳಿಯ ಡಾಬಾ ಮಾಲೀಕ ಮೆಹಬೂಬಸಾಬ್ ಪಟ್ಟೆವಾಲೆ (58) ಮೃತಪಟ್ಟವರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಹೆಡ್ ವಾರ್ಡರ್ ಅಡಿವೆಪ್ಪ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಕಲಾದಗಿ ಠಾಣೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಜೆ ಮೇಲೆ ಊರಿಗೆ ಬಂದಿದ್ದ ಹೆಡ್ ವಾರ್ಡರ್ ಅಡಿವೆಪ್ಪ ಸೆಪ್ಟೆಂಬರ್ 17ರ ರಾತ್ರಿ ಮೆಹಬೂಬಸಾಬ್ ಅವರ ಡಾಬಾಗೆ ತೆರಳಿ ಊಟ ಕೇಳಿದ್ದರು ಎನ್ನಲಾಗಿದೆ. ಈ ವೇಳೆ ಊಟ ಖಾಲಿಯಾಗಿದೆ ಎಂದು ಮೆಹಬೂಬಸಾಬ್ ತಿಳಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಗಲಾಟೆಗೆ ತಿರುಗಿದೆ ಎಂದು ಆರೋಪಿಸಲಾಗಿದೆ.
ಗಲಾಟೆ ವೇಳೆ ಅಡಿವೆಪ್ಪ ಅವರು ಮೆಹಬೂಬಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು, ಪರಿಣಾಮ ಮೆಹಬೂಬಸಾಬ್ ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ರಕ್ತಸ್ರಾವವಾಗುತ್ತಿದ್ದ ಅವರನ್ನು ಕೂಡಲೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೆಪ್ಟೆಂಬರ್ 17ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆಹಬೂಬಸಾಬ್ ಅವರು ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್ 24ರಂದು ಮೃತಪಟ್ಟಿದ್ದಾರೆ. ಗಲಾಟೆಯ ವೇಳೆ ಹೆಡ್ ವಾರ್ಡರ್ ಅಡಿವೆಪ್ಪ ಅವರ ತಲೆಗೂ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಲಾದಗಿ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಘಟನೆಗೆ ನಿಖರ ಕಾರಣ ಹಾಗೂ ಗಲಾಟೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article