ಶ್ರೀಮಠದಲ್ಲಿ ಸಂಭ್ರಮದ ಚಾತುರ್ಮಾಸ್ಯ ಸಮಾರೋಪ; ಸಪ್ತಾಹದ ಮಂಗಳ ಮಹೋತ್ಸವ ನೆರವೇರಿಸಿದ ಸುಬುಧೇಂದ್ರ ತೀರ್ಥರು
ಮಂತ್ರಾಲಯ: ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ 14ನೇ ಚಾತುರ್ಮಾಸ್ಯ ಸಮಾರೋಪ ಸಮಾರಂಭದ ಅಂಗವಾಗಿ ಮಂತ್ರಾಲಯದ ಶ್ರೀಮಠದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ನೆರವೇರಿದವು.
ಬೆಳಗ್ಗೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಶ್ರೀಮಠದಲ್ಲಿ ಶ್ರೀ ಬ್ರಹ್ಮಕರಾರ್ಚಿತ ಮೂಲ ರಾಮದೇವರ ಪೂಜೆ ನೆರವೇರಿಸಿದರು. ಬಳಿಕ 14ನೇ ಚಾತುರ್ಮಾಸ್ಯ ದೀಕ್ಷೆಯ ಸಮಾರೋಪವನ್ನು ಸೂಚಿಸುವ ಪವಿತ್ರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಚಾತುರ್ಮಾಸ್ಯ ಅವಧಿಯಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ವಿಶೇಷ ಪೂಜೆ ಮತ್ತು ಮಂಗಳ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಶ್ರೀಮಠದ ಪ್ರವಚನ ಮಂಟಪದಲ್ಲಿ ನಡೆದ ಶ್ರೀಮದ್ ಭಾಗವತ ಸಪ್ತಾಹದ ಮಂಗಳ ಮಹೋತ್ಸವವೂ ನೆರವೇರಿತು. ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಚಾತುರ್ಮಾಸ್ಯ ಸಮಾರೋಪದೊಂದಿಗೆ ಶ್ರೀಮದ್ ಭಾಗವತ ಸಪ್ತಾಹಕ್ಕೂ ಮಂಗಳೋತ್ಸವ ನೆರವೇರಿಸಲಾಯಿತು.



