No menu items!
25.2 C
Munich
Thursday, October 1, 2026

ಹಬ್ಬದ ಹೊಸ್ತಿಲಲ್ಲೇ ಗ್ರಾಹಕರಿಗೆ ದರ ಏರಿಕೆ ಬಿಸಿ: ವಾಣಿಜ್ಯ LPG ಸಿಲಿಂಡರ್ ಬೆಲೆ ₹62.50 ಭಾರಿ ಏರಿಕೆ!

Must read

ಹಬ್ಬದ ಹೊಸ್ತಿಲಲ್ಲೇ ಗ್ರಾಹಕರಿಗೆ ದರ ಏರಿಕೆ ಬಿಸಿ: ವಾಣಿಜ್ಯ LPG ಸಿಲಿಂಡರ್ ಬೆಲೆ ₹62.50 ಭಾರಿ ಏರಿಕೆ!

ನವದೆಹಲಿ: ಹಬ್ಬದ ಸೀಸನ್ ಆರಂಭದಲ್ಲೇ ಸಾರ್ವಜನಿಕರಿಗೆ ಹಾಗೂ ಹೋಟೆಲ್ ಉದ್ಯಮಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದ (ಅಕ್ಟೋಬರ್ 1) ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ದರದಲ್ಲಿ ಗಣನೀಯ ಏರಿಕೆಯಾಗಿದೆ.

19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹62.50 ರಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಡಾಬಾಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಹಬ್ಬದ ದಿನಗಳಲ್ಲಿ ಹೊರಗಿನ ಆಹಾರ ಪದಾರ್ಥಗಳ ದರವೂ ಏರಿಕೆಯಾಗುವ ಸಾಧ್ಯತೆಯಿದೆ.

ಹೊಸ ದರ ಜಾರಿಯಾದ ಬಳಿಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹2,747.50 ರಿಂದ ₹2,810 ಕ್ಕೆ ಏರಿಕೆಯಾಗಿದೆ. ಇಂದಿನಿಂದಲೇ ಈ ನೂತನ ದರಗಳು ಜಾರಿಗೆ ಬರಲಿವೆ.

ವಾಣಿಜ್ಯ ಸಿಲಿಂಡರ್ ದರ ಹೆಚ್ಚಾಗಿದ್ದರೂ, ಗೃಹಬಳಕೆಯ ಎಲ್‌ಪಿಜಿ (Domestic LPG) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಸದ್ಯ ಸಾರ್ವಜನಿಕರಿಗೆ ದೊರೆತಿರುವ ಸಮಾಧಾನದ ವಿಷಯವಾಗಿದೆ.

- Advertisement -spot_img

More articles

- Advertisement -spot_img

Latest article