ಯುಟ್ಯೂಬರ್ ಅಮುಕು ಡುಮುಕು ಮಂಜುಗೆ ಮತ್ತೊಂದು ಸಂಕಷ್ಟ! ಯಶವಂತಪುರ ಠಾಣೆಯಲ್ಲಿ FIR

Must read

ಯುಟ್ಯೂಬರ್ ಅಮುಕು ಡುಮುಕು ಮಂಜುಗೆ ಮತ್ತೊಂದು ಸಂಕಷ್ಟ! ಯಶವಂತಪುರ ಠಾಣೆಯಲ್ಲಿ FIR

ಬೆಂಗಳೂರು: ಪಬ್ನಲ್ಲಿ ಗಲಾಟೆ ಮಾಡಿಕೊಂಡು ಸುದ್ದಿಯಾಗಿದ್ದ ಯುಟ್ಯೂಬರ್ ಅಮುಕು ಡುಮುಕು ಮಂಜು ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಬಾರಿ ಪಕ್ಕದ ಮನೆಯವರ ಜೊತೆಗಿನ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಪಕ್ಕದ ಮನೆಯ ನಿವಾಸಿ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಅಮುಕು ಡುಮುಕು ಮಂಜ ಅಲಿಯಾಸ್ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿಕ್ರಂ ಮತ್ತು ಮಂಜುನಾಥ್ ಅಕ್ಕಪಕ್ಕದ ಮನೆಯವರಾಗಿದ್ದಾರೆ. ಮಂಜುನಾಥ್ ಅವರ ಸಿದ್ದ ಎಂಬಾತನ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ. ಈ ವೇಳೆ ಎರಡೂ ಮನೆಯವರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಬಳಿಕ ಎರಡು ಕಡೆಯವರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿದೆ.
ಇನ್ನು ಈ ಪ್ರಕರಣದಲ್ಲಿ ಮಂಜುನಾಥ್ ಕೂಡ ವಿಕ್ರಂ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ದೂರು ಹಾಗೂ ಪ್ರತಿದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -spot_img

More articles

- Advertisement -spot_img

Latest article