No menu items!
25.2 C
Munich
Thursday, October 1, 2026

ಚಿನ್ನ ಕಳ್ಳಸಾಗಣೆ ಕೇಸ್ʼನಲ್ಲಿ ನಟಿ ರನ್ಯಾ ರಾವ್ʼಗೆ ಮತ್ತೊಂದು ಸಂಕಷ್ಟ; ₹89 ಕೋಟಿ ದಂಡ ವಿಧಿಸಿದ ಕಸ್ಟಮ್ಸ್ ಇಲಾಖೆ

Must read

ಚಿನ್ನ ಕಳ್ಳಸಾಗಣೆ ಕೇಸ್ʼನಲ್ಲಿ ನಟಿ ರನ್ಯಾ ರಾವ್ʼಗೆ ಮತ್ತೊಂದು ಸಂಕಷ್ಟ; ₹89 ಕೋಟಿ ದಂಡ ವಿಧಿಸಿದ ಕಸ್ಟಮ್ಸ್ ಇಲಾಖೆ

ಬೆಂಗಳೂರು: ಚಿನ್ನದ ಅಕ್ರಮ ಸಾಗಾಟ ಪ್ರಕರಣದ ಆರೋಪಿಯಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ಗೆ ₹89 ಕೋಟಿ ದಂಡ ಪಾವತಿಸುವಂತೆ ಕಸ್ಟಮ್ಸ್ ಇಲಾಖೆ ಆದೇಶಿಸಿದೆ ಎಂದು ವರದಿಯಾಗಿದೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ನಡೆಸಿದ ಆರೋಪದ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖೆ ನಡೆಸಿತ್ತು. ಪ್ರಕರಣದಲ್ಲಿ ರನ್ಯಾ ರಾವ್ ಸೇರಿದಂತೆ ತರುಣ್ ಕೊಂಡರಾಜು, ಸಾಹಿಲ್ ಜೈನ್ ಹಾಗೂ ಭರತ್ ಜೈನ್ ಅವರನ್ನು ಬಂಧಿಸಲಾಗಿತ್ತು.
ತನಿಖಾ ಸಂಸ್ಥೆಯ ಪ್ರಕಾರ, ಸಹ ಆರೋಪಿಗಳೊಂದಿಗೆ ಸೇರಿ 2024ರ ಮಾರ್ಚ್ 7ರಿಂದ 2025ರ ಫೆಬ್ರವರಿ 18ರವರೆಗಿನ ಅವಧಿಯಲ್ಲಿ ಸುಮಾರು 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಆರೋಪವಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ವಿಚಾರಣೆಯ ಬಳಿಕ ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ರನ್ಯಾ ರಾವ್ಗೆ ₹89 ಕೋಟಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಇತರ ಆರೋಪಿಗಳಾದ ಸಾಹಿಲ್ ಜೈನ್ ಹಾಗೂ ಭರತ್ ಜೈನ್ಗೆ ತಲಾ ₹53 ಕೋಟಿ, ತರುಣ್ ಕೊಂಡರಾಜುಗೆ ₹49 ಕೋಟಿ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಕಸ್ಟಮ್ಸ್ ಜಂಟಿ ಆಯುಕ್ತ ಡಾ. ಸಂದೀಪ್ ಗುಂಜಾಲ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ DRI ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಬಳಿಕ ಆರೋಪಿಗಳ ಪರವಾಗಿ ನೋಟಿಸ್ ಹಾಗೂ ಪ್ರಸ್ತಾವಿತ ದಂಡದ ಕುರಿತು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಅವುಗಳ ಪರಿಶೀಲನೆಯ ನಂತರ ಕಸ್ಟಮ್ಸ್ ಇಲಾಖೆ ದಂಡ ವಿಧಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ನಿಯಮಾನುಸಾರ ದಂಡ ಪಾವತಿಸದಿದ್ದಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ಆರೋಪಿಗಳ ಆಸ್ತಿಗಳ ವಿರುದ್ಧ ವಸೂಲಾತಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ.

- Advertisement -spot_img

More articles

- Advertisement -spot_img

Latest article