ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: 10ನೇ ದಿನವೂ ದೇವಾಲಯದತ್ತ ಹರಿದುಬಂದ ಜನಸ್ತೋಮ!

Must read

ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: 10ನೇ ದಿನವೂ ದೇವಾಲಯದತ್ತ ಹರಿದುಬಂದ ಜನಸ್ತೋಮ!

ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಜಾತ್ರೆ ಕಳೆಗಟ್ಟಿದ್ದು, 10ನೇ ದಿನವಾದ ಭಾನುವಾರ ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ. ವಾರಾಂತ್ಯದ ಹಿನ್ನೆಲೆ ಹಾಗೂ ಜಾತ್ರೆಯ ಕೊನೆಯ ದಿನಗಳು ಸಮೀಪಿಸುತ್ತಿರುವುದರಿಂದ ದೇವಾಲಯದ ಸುತ್ತಮುತ್ತ ಭಾರೀ ಜನಸಂದಣಿ ಕಂಡುಬಂದಿದೆ.
ಹಾಸನಾಂಬೆ ದೇವಿಯ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಧರ್ಮದರ್ಶನದ ಸಾಲುಗಳ ಜೊತೆಗೆ 300 ಮತ್ತು 1,000 ರೂಪಾಯಿ ವಿಶೇಷ ಪ್ರವೇಶ ಟಿಕೆಟ್ ಕೌಂಟರ್ಗಳ ಸಾಲುಗಳೂ ಭಕ್ತರಿಂದ ತುಂಬಿ ತುಳುಕುತ್ತಿವೆ. ದೇವಿಯ ದರ್ಶನಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಅವಕಾಶ ಇರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಸನಾಂಬೆ ದೇವಿಯ ದರ್ಶನ ಪಡೆಯುವ ನಿರೀಕ್ಷೆಯಿದೆ. ಹೀಗಾಗಿ ದೇವಾಲಯದ ಸುತ್ತಮುತ್ತ ಭದ್ರತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಇನ್ನು ಭಕ್ತರ ಸುಗಮ ದರ್ಶನಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ದೇವಾಲಯದ ಒಳಗೆ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ವಿಧಿಸಲಾಗಿದ್ದು, ಫೋಟೋ ಮತ್ತು ವಿಡಿಯೋ ಚಿತ್ರೀಕರಣಕ್ಕೂ ಅವಕಾಶವಿಲ್ಲ. ದರ್ಶನದ ವೇಳೆ ಬಾಗಿಲಿನ ಬಳಿ ನಿಲ್ಲದೆ, ದೇವಿಯ ದರ್ಶನ ಪಡೆದು ತ್ವರಿತವಾಗಿ ಮುಂದುವರಿಯುವಂತೆ ಭಕ್ತರಿಗೆ ಸೂಚನೆ ನೀಡಲಾಗುತ್ತಿದೆ.

- Advertisement -spot_img

More articles

- Advertisement -spot_img

Latest article