ಮೋದಿ ಬೆಂಗಳೂರು ಭೇಟಿಗೆ ಫ್ಲೆಕ್ಸ್ ಸಮರ! ಒಂದೆಡೆ ಕೇಸರಿ ಬಾವುಟ, ಮತ್ತೊಂದೆಡೆ ಡಿಕೆಶಿ ಸ್ವಾಗತದ ಬ್ಯಾನರ್!

Must read

ಮೋದಿ ಬೆಂಗಳೂರು ಭೇಟಿಗೆ ಫ್ಲೆಕ್ಸ್ ಸಮರ! ಒಂದೆಡೆ ಕೇಸರಿ ಬಾವುಟ, ಮತ್ತೊಂದೆಡೆ ಡಿಕೆಶಿ ಸ್ವಾಗತದ ಬ್ಯಾನರ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಕ್ರೆಡಿಟ್ ವಾರ್ ಬೆನ್ನಲ್ಲೇ ಇದೀಗ ಫ್ಲೆಕ್ಸ್ ವಾರ್ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಹಾಗೂ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬ್ಯಾನರ್ ಪೈಪೋಟಿ ಜೋರಾಗಿದೆ.
ಬೆಂಗಳೂರು ಮೆಟ್ರೋ ಯೋಜನೆಗೆ ಹೆಚ್ಚಿನ ಕೊಡುಗೆ ಯಾರದ್ದು ಎಂಬ ವಿಚಾರದಲ್ಲಿ ಈಗಾಗಲೇ ರಾಜಕೀಯ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ಅಳವಡಿಸಿದ್ದಾರೆ.
ಡೈರಿ ಸರ್ಕಲ್ನಿಂದ ಪ್ರಧಾನಿ ಮೋದಿ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದುದ್ದಕ್ಕೂ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ಗಳು ರಾರಾಜಿಸುತ್ತಿವೆ.
ಒಂದೆಡೆ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಫ್ಲೆಕ್ಸ್ಗಳ ಜೊತೆಗೆ ಕೇಸರಿ ಧ್ವಜಗಳನ್ನು ಅಳವಡಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸುವ ಫ್ಲೆಕ್ಸ್ ಹಾಗೂ ಬಂಟಿಂಗ್ಸ್ಗಳನ್ನು ಹಾಕಿದ್ದಾರೆ.
ಪ್ರಧಾನಿ ಮೋದಿ ಅವರಿಂದ ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡುವ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬ್ಯಾನರ್ ಪೈಪೋಟಿ ಗಮನ ಸೆಳೆಯುತ್ತಿದೆ.
ಒಟ್ಟಿನಲ್ಲಿ ಮೆಟ್ರೋ ಯೋಜನೆಯ ಕ್ರೆಡಿಟ್ ವಾರ್ ಬಳಿಕ ಇದೀಗ ಮೋದಿ–ಡಿಕೆಶಿ ಸ್ವಾಗತದ ಫ್ಲೆಕ್ಸ್ ವಾರ್ ಬೆಂಗಳೂರಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

- Advertisement -spot_img

More articles

- Advertisement -spot_img

Latest article