KPSC ಹಗರಣ : ಹೈಕೋರ್ಟ್‌’ಗೆ ಇಡಿ ಸ್ಫೋಟಕ ಮಾಹಿತಿ, ಮತ್ತಷ್ಟು ಪರೀಕ್ಷೆಗಳಲ್ಲೂ ಅಕ್ರಮ ಪತ್ತೆ!

Must read

KPSC ಹಗರಣ : ಹೈಕೋರ್ಟ್‌’ಗೆ ಇಡಿ ಸ್ಫೋಟಕ ಮಾಹಿತಿ, ಮತ್ತಷ್ಟು ಪರೀಕ್ಷೆಗಳಲ್ಲೂ ಅಕ್ರಮ ಪತ್ತೆ!

ಆರ್‌ಡಿಪಿಆರ್ ಪರೀಕ್ಷೆಯಲ್ಲಿ ಒಎಂಆರ್ ಪತ್ರಿಕೆಗಳನ್ನು ತಿದ್ದಿರುವ ಆರೋಪವಿದ್ದು, ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಿಲ್ಲ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಆಯ್ಕೆ ಪಟ್ಟಿ ಅಂತಿಮಗೊಳಿಸಲಾಗಿದ್ದು, ಅಕ್ರಮದ ಆರೋಪ ಎದುರಿಸಿದ 10 ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿದೆ ಎಂದು ಇಡಿ ತಿಳಿಸಿದೆ.
ಇನ್ನು ಕೆಎಎಸ್ ನೇಮಕಾತಿ ವಿಚಾರದಲ್ಲಿ ಪ್ರಕಾಶ್ ಅವರಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಂಗ್ವಾರ್ ಅವರ ಆಪ್ತ ಸಹಾಯಕ ಮಹೇಶ್ ಅವರು ಅಭ್ಯರ್ಥಿಗಳಿಂದ 40 ಲಕ್ಷದಿಂದ 1.5 ಕೋಟಿ ರೂಪಾಯಿವರೆಗೆ ಹಣ ವಸೂಲಿ ಮಾಡಿ ಗ್ಯಾನೇಂದ್ರ ಅವರಿಗೆ ನೀಡಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಇಡಿ ತಿಳಿಸಿದೆ.
ಮೋಟಾರು ವಾಹನ ನಿರೀಕ್ಷಕ ಹಾಗೂ ಸಹಾಯಕ ಎಂಜಿನಿಯರ್ ನೇಮಕಾತಿ ವಿಚಾರದಲ್ಲೂ ಪ್ರಕಾಶ್ ಟಿ. ಅವರ ಕೈಬರಹದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಹುದ್ದೆಗಳಿಗಾಗಿ ಅಕ್ರಮವಾಗಿ ಪಡೆದ ಲಂಚದ ಹಣದ ವಿವರಗಳಿವೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಈ ಎಲ್ಲ ಪ್ರಕರಣಗಳ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ ಎಂದು ಇಡಿ ಹೈಕೋರ್ಟ್‌ಗೆ ತಿಳಿಸಿದೆ.

- Advertisement -spot_img

More articles

- Advertisement -spot_img

Latest article