ಮಂತ್ರಾಲಯದಲ್ಲಿ ತುಂಗಾರತಿ, ಲಕ್ಷದೀಪೋತ್ಸವ ಸಂಭ್ರಮ: ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತರು

Must read

ಮಂತ್ರಾಲಯದಲ್ಲಿ ತುಂಗಾರತಿ, ಲಕ್ಷದೀಪೋತ್ಸವ ಸಂಭ್ರಮ: ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತರು

 

ಮಂತ್ರಾಲಯದಲ್ಲಿ ಕಾರ್ತಿಕ ಶುದ್ಧ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ತುಂಗಭದ್ರಾ ನದಿಯ ತಟದಲ್ಲಿ ಭವ್ಯ ತುಂಗಾರತಿ (ಪುಣ್ಯನದಿ ಆರತಿ) ನೆರವೇರಿಸಲಾಯಿತು. ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸ್ವಾಮಿ ಗೋವಿಂದ ದೇವ್ ಗಿರಿ ಜೀ ಮಹಾರಾಜ್ ಅವರ ದಿವ್ಯ ಸಾನ್ನಿಧ್ಯದಲ್ಲಿ ತುಂಗಾರತಿ ನಡೆಯಿತು. ಇದೇ ಸಂದರ್ಭದಲ್ಲಿ ಉಭಯ ಶ್ರೀಗಳು ಶ್ರೀ ಪ್ರಹ್ಲಾದ ರಾಜರ ಉತ್ಸವಕ್ಕೆ ಚಾಲನೆ ನೀಡಿದರು.

ನಂತರ ನದಿಯ ತಟದಲ್ಲಿ ಲಕ್ಷದೀಪೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಸಾವಿರಾರು ದೀಪಗಳ ಬೆಳಕಿನಿಂದ ನದಿಯ ದಡ ಕಂಗೊಳಿಸಿತು. ದೀಪಗಳ ಬೆಳಕು ಭಕ್ತಿ, ಪಾವಿತ್ರ್ಯ ಹಾಗೂ ಅಜ್ಞಾನದ ಕತ್ತಲೆಯನ್ನು ದೂರಮಾಡುವ ಜ್ಞಾನದ ಸಂಕೇತವಾಗಿ ಕಂಗೊಳಿಸಿತು.

ಬಳಿಕ ಶ್ರೀಮಠಕ್ಕೆ ಆಗಮಿಸಿದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಠದ ಪ್ರಾಕಾರದಲ್ಲಿ ಪವಿತ್ರ ಜ್ವಾಲಾತೋರಣ ನೆರವೇರಿಸಿದರು. ನಂತರ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸ್ವಾಮಿ ಗೋವಿಂದ ದೇವ್ ಗಿರಿ ಜೀ ಮಹಾರಾಜ್ ಅವರು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ಪವಿತ್ರ ಆಚರಣೆಗಳನ್ನು ಕಣ್ತುಂಬಿಕೊಂಡರು. ಮಂತ್ರಾಲಯದಲ್ಲಿ ಕಾರ್ತಿಕ ಪೂರ್ಣಿಮೆಯ ಸಂಭ್ರಮ ಭಕ್ತಿಭಾವದಿಂದ ಕಳೆಗಟ್ಟಿತ್ತು

- Advertisement -spot_img

More articles

- Advertisement -spot_img

Latest article