ಏನಪ್ಪಾ ಇದು ಸನ್ನಿಲಿಯೋನ್ ಶಾರ್ಟ್‍ಫಿಲ್ಮ್, ಫಿಲ್ಮ್ ಫೇರ್ ಕಿರುಚಿತ್ರ ಸ್ಪರ್ಧೆಗೆ ಸೆಲೆಕ್ಟ್ ಆಯ್ತಾ ಅಂತ ಬಾಯಿಮೇಲೆ ಬೆರಳಿಟ್ಟು ಚಿಂತೆಮಾಡ್ತಿದ್ದೀರಾ? ನೀವ್ ನಂಬ್ಲಿಲ್ಲ ಅಂದ್ರೂ ಅದೇ ಸತ್ಯ ಕಣ್ರಿ..! ಯಾಕಂದ್ರೆ ಸನ್ನಿ ಇತ್ತಿಚಿಗೆ ಮಾಡಿದ್ದ ಕಿರುಚಿತ್ರ ಈಗ ಫಿಲ್ಮ್ ಫೇರ್‍ಗೆ ಸೆಲೆಕ್ಟ್ ಆಗಿದೆ..!
ಸನ್ನಿ ಎನ್ನುವ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಇಡಿ ಜಗತ್ತಿಗೆ ಚಿರಪರಿಚತವಾದ ಹೆಸ್ರು ಈಕೆಯದು.
ಗೂಗಲ್, ಯೂಟ್ಯೂಬ್‍ನಲ್ಲಿ ಸನ್ನಿ ಹಾಟ್ ಚಿತ್ರಗಳನ್ನು ನೋಡಲು ಸರದಿಸಾಲಿನಲ್ಲಿ ನಿಲ್ಲುವವರ ಸಂಖ್ಯೆಯೇ ಹೆಚ್ಚು. ಹಾಟ್ ವೀಡಿಯೋಗಳಿಂದ ಯುವಕರ ಮನಕೆಡಿಸಿದ್ದಲ್ಲದೆ.. ಭಾರತೀಯ ಚಲನಚಿತ್ರಗಳಲ್ಲೂ ತನ್ನ ಹೆಸ್ರು ಇನ್ನಷ್ಟು ಗಟ್ಟಿ ಮಾಡಿಕೊಂಡ ಬೇಬಿ ಈ ಸನ್ನಿ..!
ಹಾಟ್-ಹಾಟ್ ಚಿತ್ರಗಳಿಂದ ಪಡ್ಡೆ ಹುಡುಗರ ತಲೆ ಕೆಡಿಸಿದ್ದ ಈ ಬೆಡಗಿ, ಚಲನಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮನಗೆಲ್ಲಲು ಸಾಧ್ಯ ಆಗ್ಲಿಲ್ಲ ಅಂತ ಜಂಬ ಕೊಚ್ಕೊಳ್ತಿದ್ದ ಬಿ-ಟೌನ್ ಬೆಡಗಿಯರಿಗೆ ಸನ್ನಿ ಸರಿಯಾಗಿಯೇ ಶಾಕ್ ಕೊಟ್ಟಿದ್ದಾಳೆ..!
ಉಳಿದ ನಟಮಣಿಯರಿಗಿಂತ ನಾನೇನು ಕಮ್ಮಿ ಇಲ್ಲ ಅಂತ ತನ್ನ ಸೌಂದರ್ಯವನ್ನು ನಟನೆಯ ಮೂಲಕ ತೊರಿಸಿಕೊಟ್ಲು. ಬಾಲಿವುಡ್‍ನ ಎಲ್ಲಾ ನಟಿಯರಿಗೂ ಪೈಪೋಟಿ ಕೊಡುತ್ತಾ ನಿಮಗಿಂತ ನಾನು ಕಮ್ಮಿ ಇಲ್ಲ ಅಂತ ಸೆಡ್ಡು ಹೊಡಿತಿದಾಳೆ ಈ ಹಾಟ್ ಸುಂದ್ರಿ..!
ಬಿ-ಟೌನ್‍ನಲ್ಲಿ ಮಾತ್ರ ಸದ್ದುಮಾಡ್ತಿದ್ದ ಈ ಹಾಟ್‍ಬ್ಯೂಟಿ ಇತ್ತೀಚಿಗೆ ಕನ್ನಡದಲ್ಲೂ ಸದ್ದು ಮಾಡಿದ್ಲು. ಡಿ.ಕೆ ಚಿತ್ರದ ಮೂಲಕ ಎಂಟ್ರಿಕೊಟ್ಟಿದ್ದ ಸನ್ನಿ ಇತ್ತೀಚಿಗಿನ ಲವ್‍ಯು ಆಲಿಯಾ ಚಿತ್ರದ ಹಾಟ್ ಸಾಂಗ್ ಒಂದ್ರಲ್ಲಿ ಸಖತ್ ಸ್ಟೆಪ್ ಹಾಕಿ ಯುವಕರ ನಿದ್ದೆಗೆಡಿಸಿದ್ಲು ನೋಡಿ..!
ಆದ್ರೂ ಈಕೆಯನ್ನ ಒಂದು ವಿಚಾರದಲ್ಲಿ ಮೆಚ್ಚಲೇಬೇಕು ನೋಡಿ..! ಸನ್ನಿಗೆ ಹಣ ಮಾಡುವುದು, ಪ್ರಚಾರ ತೆಗೆದುಕೊಳ್ಳುವುದರ ಜೊತೆಗೆ ಒಂದಿಷ್ಟು ಸಮಾಜದ ಕಾಳಜಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಗುಣವಿದೆ. ಶಾಕ್ ಆಗ್ಬೇಡಿ ಹೀಗಂತಾ ನಾನ್ ಹೇಳ್ತಿಲ್ಲ ಆಕೆ ನಟಿಸಿರುವ ಶಾರ್ಟ್‍ಫಿಲ್ಮ್ ಹೇಳ್ತಾ ಇದೆ..! ಯಾವ್ದಪ್ಪಾ ಅಂತಾ ಸಮಾಜದ ಬಗ್ಗೆ ಕಾಳಜಿ ಇರುವಂತಹ ಶಾರ್ಟ್ ಮೂವಿ ಅಂತೀರಾ..? ಅದೆ ಕಣ್ರಿ ಇತ್ತಿಚಿಗೆ ಸ್ಮೋಕಿಂಗ್ ಇಸ್ ಇಂಜ್ಯೂರಿ ಟು ಹೆಲ್ತ್ ಕುರಿತು ಒಂದು ಶಾರ್ಟ್ ಫಿಲ್ಮ್ ನಲ್ಲಿ ಅಭಿನಯಿಸಿದ್ಲು ಸನ್ನಿ..! ಧೂಮಪಾನ ಮನುಷ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋ ಬಗ್ಗೆ ಶಾರ್ಟ್‍ಮೂವಿ ಮಾಡಿದ್ರು..!
ಅಷ್ಟೆ ಅಲ್ಲ ಈ ಶಾರ್ಟ್ ಫಿಲ್ಮ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿತ್ತು. ಎಷ್ಟರ ಮಟ್ಟಿಗೆ ಪಾಪುಲಾರಿಟಿಯನ್ನು ಕ್ರಿಯೇಟ್ ಮಾಡ್ತು ಅಂದ್ರೆ ಈ ಶಾರ್ಟ್ ಮೂವಿ ಈಗ ಫಿಲಂಫೇರ್ ಕಿರುಚಿತ್ರ ಸ್ಫರ್ಧೆಗೆ ನಾಮಿನೇಟ್ ಆಗುವಷ್ಟು…! ಆದೇನೇ ಇರ್ಲಿ ಈ ಹಾಟ್ ಬೆಡಗಿ ಸ್ವಲ್ಪವಾದ್ರು ಸೋಶಿಯಲ್ ಕನ್ಸರ್ನ್ ಇಟ್ಕೊಂಡು ಮೂವಿಮಾಡಿದ್ದಾಳಲ್ಲ ಎನ್ನುವುದೇ ಸಂತಸದ ವಿಚಾರ ಅಲ್ವಾ..!
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮನೆಯಲ್ಲೆ 9 ಕೆ.ಜಿ ಗಾಂಜಾ ಬೆಳೆದಿದ್ದ ಭೂಪ..!
ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!
ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!