ಬಾಕ್ಸ್ ಆಫೀಸ್ ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ ರಾಮಾಯಣ; ಪುಷ್ಪ 2 ಹಿಂದಿಕ್ಕಿ ಬಾಹುಬಲಿ 2 ದಾಖಲೆಯತ್ತ ಯಶ್ ಸಿನಿಮಾ!
ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ 21 ದಿನಗಳನ್ನು ಪೂರೈಸಿರುವ ಚಿತ್ರ, ಇದೀಗ ಪುಷ್ಪ 2 ಸಿನಿಮಾದ ಜೀವಮಾನದ ಗಳಿಕೆಯನ್ನು ಹಿಂದಿಕ್ಕಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಸಾಕ್ನಿಲ್ಕ್ ವರದಿಯ ಪ್ರಕಾರ, ರಾಮಾಯಣ ಸಿನಿಮಾ ವಿಶ್ವಾದ್ಯಂತ ಒಟ್ಟು 1,755.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮತ್ತೊಂದೆಡೆ, ಪುಷ್ಪ 2 ಸಿನಿಮಾ 1,742.10 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಈ ಮೂಲಕ ಪುಷ್ಪ 2 ದಾಖಲೆಯನ್ನು ರಾಮಾಯಣ ಹಿಂದಿಕ್ಕಿದೆ.
ಇದೀಗ ರಾಮಾಯಣದ ಮುಂದಿನ ಗುರಿ ಪ್ರಭಾಸ್ ಅಭಿನಯದ ಬಾಹುಬಲಿ 2 ಸಿನಿಮಾ. ಈ ಚಿತ್ರ ವಿಶ್ವಾದ್ಯಂತ 1,788.06 ಕೋಟಿ ರೂಪಾಯಿ ಗಳಿಸಿದ್ದು, ರಾಮಾಯಣ ಈ ದಾಖಲೆಯನ್ನು ಮುರಿಯಲು ಇನ್ನೂ 32.46 ಕೋಟಿ ರೂಪಾಯಿ ಗಳಿಸಬೇಕಿದೆ.
ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ದಂಗಲ್ 2,070.30 ಕೋಟಿ ರೂಪಾಯಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಧುರಂಧರ್ 2 ಸಿನಿಮಾ 1,813.39 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಹುಬಲಿ 2 ಮೂರನೇ ಸ್ಥಾನದಲ್ಲಿದೆ.
ಇನ್ನು 21 ದಿನಗಳ ಅಂತ್ಯಕ್ಕೆ ಭಾರತದಲ್ಲಿ ರಾಮಾಯಣ ಚಿತ್ರದ ನಿವ್ವಳ ಗಳಿಕೆ 982.55 ಕೋಟಿ ರೂಪಾಯಿ ತಲುಪಿದೆ. ತೆರಿಗೆ ಸೇರಿದಂತೆ ದೇಶೀಯ ಒಟ್ಟು ಸಂಗ್ರಹ 1,173.60 ಕೋಟಿ ರೂಪಾಯಿಯಾಗಿದೆ. 21ನೇ ದಿನದಂದು 15,700 ಪ್ರದರ್ಶನಗಳ ಮೂಲಕ ಸಿನಿಮಾ 9.60 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ.
ವಿದೇಶಿ ಮಾರುಕಟ್ಟೆಗಳಲ್ಲೂ ರಾಮಾಯಣ ಉತ್ತಮ ಪ್ರದರ್ಶನ ಮುಂದುವರಿಸಿದೆ. ಈವರೆಗೆ ವಿದೇಶಗಳಿಂದ 582 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರೊಂದಿಗೆ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 1,755.60 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಭಾಷಾವಾರು ಗಳಿಕೆಯನ್ನು ಗಮನಿಸಿದರೆ, 21ನೇ ದಿನದಂದು ಹಿಂದಿ ಆವೃತ್ತಿಯಿಂದ 6.75 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕನ್ನಡದಲ್ಲಿ 75 ಲಕ್ಷ, ತಮಿಳಿನಲ್ಲಿ 70 ಲಕ್ಷ, ತೆಲುಗಿನಲ್ಲಿ 30 ಲಕ್ಷ ಹಾಗೂ ಮಲಯಾಳಂನಲ್ಲಿ 1.10 ಕೋಟಿ ರೂಪಾಯಿ ಗಳಿಸಿದೆ.



