ಬಾಯ್ ಅಥವಾ ಗರ್ಲ್ ಫ್ರೆಂಡ್ ಇದ್ದಾರೆ ಅಂತ ತಿಳಿದ್ರೆ ಸಾಕು ಕಾಲೇಜಿನ ಪ್ರಿನ್ಸಿಪಲ್ ಅವರ ಚೇಂಬರ್‍ಗೆ ಕರ್ದು ನೀವು ಕಾಲೇಜ್‍ಗೆ ಓದೋಕೆ ಬಂದಿರೋ ಅಥವಾ ಲಲ್ಲೆ ಹೊಡೊಯೋಕೆ ಬಂದಿದಿರೋ..? ಅಂತ ಕ್ಲಾಸ್ ತಗೊಳ್ಳೊ ಅದೆಷ್ಟೋ ಉದಾಹರಣೆಗಳಿವೆ. ಇನ್ನು ಮನೆವ್ರಿಗೆ ವಿಷ್ಯ ಗೊತ್ತಾಯ್ತು ಅಂದ್ರೆ ಮುಗೀತು ಕಥೆ ಕಾಲೇಜ್ ಲೈಫ್‍ಗೆ ಟಾಟಾ ಬೈಬೈನೇ ಗತಿ..! ಹೀಗಿರೊ ಇಂದಿನ ಸನ್ನಿವೇಶದಲ್ಲಿ ಬಾಯ್ ಫ್ರೆಂಡ್ ಇದ್ರೆ ಮಾತ್ರ ಕಾಲೇಜ್‍ಗೆ ಎಂಟ್ರಿ ಅಂದ್ರೆ ಹೆಂಗಿರುತ್ತೆ..! ಅಂತಹ ಅಚ್ಚರಿಯ ಘಟನೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್‍ನಲ್ಲಿ ನಡೆದಿದೆ ನೋಡಿ..! ನಿಮಗೆ ಬಾಯ್ ಫ್ರೆಂಡ್ ಇದಾರಾ..? ಹಾಗಿದ್ರೆ ಮಾತ್ರ ಕಾಲೇಜ್‍ಗೆ ಎಂಟ್ರಿ ಕೊಡ್ಬೇಕು..! ಎಲ್ಲಾ ಗರ್ಲ್ಸ್ ಅಟ್ಲೀಸ್ಟ್ ಒಬ್ಬ ಹುಡ್ಗನ್ನಾದ್ರೂ ಲವ್ ಮಾಡ್ತಾ ಇರ್ಬೇಕು ಅಂತ ನೋಟಿಸ್ ಬೋರ್ಡ್‍ನಲ್ಲಿ ಪ್ರಕಟ ಮಾಡಿದ್ದಾರೆ. ಇದನ್ನು ನೋಡಿದ್ದ ವಿದ್ಯಾರ್ಥಿಯರು ದಂಗಾಗಿ ಹೋಗಿದ್ದಾರೆ..! ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್‍ಗಳಲ್ಲಿ ಒಂದಾದ ಆರ್.ವಿ ಕಾಲೇಜ್‍ನಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದಿದ್ದು ಕಾಲೇಜು ಪ್ರಾಂಶುಪಾಲರ ನಕಲಿ ಸಹಿ ಬಳಸಿ ನೋಟಿಸ್ ಸಿದ್ದ ಪಡಿಸಿದ್ದಾರೆ. ಫೆಬ್ರವರಿ 14ರ ಒಳಗಾಗಿ ಕಾಲೇಜ್‍ನಲ್ಲಿ ಎಲ್ಲಾ ವಿದ್ಯಾರ್ಥಿನಿಯರೂ ಬಾಯ್‍ಫ್ರೆಂಡ್ ಹೊಂದಿರಬೇಕು. ಇಲ್ಲದೆ ಇದ್ದ ಪಕ್ಷದಲ್ಲಿ ಕಾಲೇಜ್‍ಗೆ ಪ್ರವೇಶ ನೀಡೋದಿಲ್ಲ ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. ಇದು ವಿದ್ಯಾರ್ಥಿಗಳ ನಡುವೆ ಭಾರಿ ಚರ್ಚೆಯಾಗಿದ್ದಲ್ಲದೆ ಜಾಲತಾಣಗಳಲ್ಲೂ ಸದ್ದು ಮಾಡ್ತಾ ಇದೆ. ಕಾಲೇಜಿನ ಆಡಳಿತ ಮಂಡಳಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಲು ಮುಂದಾಗಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಇರ್‍ರೆಸ್ಪಾನ್ಸಿಬಲ್ ಆಟಕ್ಕೆ ನನ್ ******* ಅಂದ ಪ್ರಥಮ್.!!
ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?
ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!