ಲಿಮ್ಕಾ ಬುಕ್ ಆಫ್ ರೆಕಾರ್ಡ್‍ಗೆ ಕೆಎಸ್‍ಆರ್‍ಟಿಸಿ..!

Must read

ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ನವ ನವೀನ ಬಸ್‍ಗಳನ್ನು ಸಾರ್ವಜನಿಕರ ಸೇವೆಗಾಗಿಯೇ ಮೀಸಲಿಟ್ಟು ಏಷ್ಯಾದ ನಂ.1 ಸಾರಿಗೆ ಸಂಸ್ಥೆ ಎಂದೆನಿಸಿಕೊಂಡಿರುವ ರಾಜ್ಯದ ಕೆಎಸ್‍ಆರ್‍ಟಿಸಿ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸೃಷ್ಠಿ ಮಾಡಿದೆ..! ದೇಶದಲ್ಲೆ ಅತೀ ಹೆಚ್ಚು ಪ್ರಶಸ್ತಿಗೆ ಭಾಜನವಾದ ಮೊಟ್ಟ ಮೊದಲ ಸಾರಿಗೆ ಸಂಸ್ಥೆ ಎಂಬ ಖ್ಯಾತಿಗಳಿಸಿದ್ದಲ್ಲದೆ ಲಿಮ್ಕಾ ಬುಕ್‍ಆಫ್ ರೆಕಾರ್ಡ್ಸ್ ಗೆ ತನ್ನ ಹೆಸರು ಸೇರ್ಪಡೆಗೊಂಡಿದೆ..! ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ನಮ್ಮ ಸಂಸ್ಥೆಗೆ ಸಾಕಷ್ಟು ಪ್ರಶಸ್ತಿಗಳು ಬಂದು ಲಿಮ್ಕಾ ರೆಕಾರ್ಡ್ ಬುಕ್‍ಗೆ ಸೇರಿಕೊಂಡಿರೋದು ಹೆಮ್ಮೆಯ ಸಂಗತಿ. ಹೀಗಾಗಿ ನಮ್ಮ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಸರ ಸ್ನೇಹಿಯಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಸಾರಿಗೆ ಸಂಸ್ಥೆ ಲಾಭ ಪಡೆದುಕೊಂಡಿದ್ದು 2015-16ನೇ ಸಾಲಿನಲ್ಲಿ ನಮ್ಮ ಸಂಸ್ಥೆ 114.95 ಕೋಟಿ ಲಾಭ ಪಡೆದುಕೊಂಡಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಇದರಲ್ಲಿ 64 ಕೋಟಿ ರೂಗಳನ್ನು ನೌಕರ ಸಿಬ್ಬಂದಿಗಳು ನಿವೃತ್ತಿಯ ಸಮಯದಲ್ಲಿ ನೀಡಲು ಗ್ರ್ಯಾಚುಟಿ ನಿಧಿಗೆ ಜಮೆ ಮಾಡಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆ ಹೊಂದಿದ್ದ 314 ಕೋಟಿ ರೂ ಸಾಲದಲ್ಲಿ 161 ಕೋಟಿ ರೂ ಸಾಲ ತೀರಿಸಿದ್ದೇವೆ. ಅಲ್ಲದೆ ದೇಶದಲ್ಲೆ ಪ್ರಪ್ರಥಮ ಬಾರಿಗೆ ನೂರಕ್ಕೆ ನೂರರಷ್ಟು ಬಯೋ ಡೀಸೆಲ್ ಮಲ್ಟಿ ಆಕ್ಸೆಲ್‍ನ 25 ಬಸ್ ಸೇವೆಯನ್ನು ಈಗಾಗಲೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಾಯ್ ಫ್ರೆಂಡ್ ಇದಾರಾ..? ಹಾಗಿದ್ರೆ ಮಾತ್ರ ಕಾಲೇಜ್‍ಗೆ ಬನ್ನಿ..!

ಇರ್‍ರೆಸ್ಪಾನ್ಸಿಬಲ್ ಆಟಕ್ಕೆ ನನ್ ******* ಅಂದ ಪ್ರಥಮ್.!!

ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?

ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್

ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!

ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??

ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!

- Advertisement -spot_img

More articles

- Advertisement -spot_img

Latest article