ಸ್ಯಾಂಡಲ್ವುಡ್ಗೆ ಇನ್ನು ಕೆಲವೇ ದಿನಗಳಲ್ಲಿ ಬಿಗ್ ಎಂಟ್ರಿ ಕೊಡ್ತಾ ಇದ್ದಾರೆ ಬಾಲಿವುಡ್ ಬೆಡಗಿ ಬಿಪಾಶಾ ಬಸು.. ಕನ್ನಡ ಚಿತ್ರರಂಗದ ಸ್ಟಾರ್ ಆಕ್ಟರ್ ಜೊತೆ ಸೆಟ್ ಏರ್ತಾರಂತೆ ಈ ಮಾದಕ ಚಲುವೆ..! ಅಷ್ಟಕ್ಕೂ ಈ ಹಾಟ್ ಬೆಡಗಿ ಕನ್ನಡದ ಯಾವ ನಟನ ಜೊತೆ ಸಿನಿಮಾ ಮಾಡೋಕೆ ಬರ್ತಾ ಇದ್ದಾರೆ ಅನ್ನೊ ಕುತೂಹಲ ಇದೆಯಾ..! ಆ ನಟ ಬೇರ್ಯಾರೂ ಅಲ್ಲ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ. ಹೌದು.. ನಮ್ಮ ಸೆಂಚುರಿ ಸ್ಟಾರ್ ಶಿವಣ್ಣ ಜೊತೆ ಬಿಪಾಶಾ ನಟಿಸಲಿದ್ದಾಳೆ. ಲೀಡರ್ ಚಿತ್ರಕ್ಕೆ ಬಾಲಿವುಡ್ ಕ್ವೀನ್ ಬಿಪಾಶಾ ಅವರನ್ನು ಕರೆಸುವ ಯೋಚನೆಯಲ್ಲಿದ್ದಾರಂತೆ ಚಿತ್ರ ತಂಡ. ಲೀಡರ್ ಚಿತ್ರದಲ್ಲಿನ ಐಟಂ ಸಾಂಗ್ಗೆ ಬಿಪಾಶಾ ಹೆಸರು ಕೇಳಿ ಬಂದಿದ್ದು ಎಲ್ಲವೂ ಅಂದುಕೊಂಡಂತೆ ಆದ್ರೆ ಸ್ಯಾಂಡಲ್ವುಡ್ನಲ್ಲಿ ಬಾಲಿವುಡ್ ಬೆಡಗಿ ಕಾಣಿಸಿಕೊಳ್ಳೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗ್ತಾ ಇದೆ. ಸದ್ಯಕ್ಕೆ ಲೀಡರ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶಿವಣ್ಣನ ಜೊತೆ ಪ್ರಣಿತಾ ಸುಭಾಶ್ ನಟ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ವಂಶಿ ಕೃಷ್ಣ, ಹಾಗೂ ಲೂಸ್ ಮಾದ ನಟಿಸಲಿದ್ದಾರೆ. ಈ ಚಿತ್ರಕ್ಕೆ ರೋಸ್ ಖ್ಯಾತಿಯ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಿದ್ದು ವೀರ್ ಸಮರ್ಥ್ ಸಂಗೀತ ನಿರ್ದೇಶಕರಾಗಿದ್ದಾರೆ. ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ಮೂಡಿ ಬರ್ತಾ ಈ ಚಿತ್ರಕ್ಕೆ ತರುಣ್ ಶಿವಪ್ಪ ಹಾಗೂ ಹಾರ್ದಿಕ್ ಗೌಡ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ತಂಡ ಭರದಿಂದ ಶೂಟಿಂಗ್ ಕಾರ್ಯ ಮುಂದುವರೆಸಿದ್ದಾರೆ. ಚಿತ್ರಕ್ಕೆ ಬಿಪಾಶಾ ಬಸು ಅವರನ್ನು ಕರೆಸುವ ಚಿತ್ರತಂಡದ ಪ್ಲಾನ್ ಸಕ್ಸಸ್ ಕಾಣುತ್ತೊ ಇಲ್ವೋ ಕಾದು ನೋಡಬೇಕಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ
ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?
ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.
ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???
ಈ ವಾರ ಮಂತ್ರಿಮಾಲ್ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!