ರಾಮನ ಶೌರ್ಯಕ್ಕೆ ರಾವಣನ ರೌದ್ರಾವತಾರ! ಯಶ್ ಹೊಸ ಲುಕ್ ನೋಡಿ ಸಿನಿಪ್ರಿಯರು ಫಿದಾ!

Must read

ರಾಮನ ಶೌರ್ಯಕ್ಕೆ ರಾವಣನ ರೌದ್ರಾವತಾರ! ಯಶ್ ಹೊಸ ಲುಕ್ ನೋಡಿ ಸಿನಿಪ್ರಿಯರು ಫಿದಾ!

 

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಮಹಾಕಾವ್ಯ ‘ರಾಮಾಯಣ’ ಮತ್ತೆ ಸದ್ದು ಮಾಡುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಭವ್ಯ ದೃಶ್ಯಗಳು, ಅದ್ಭುತ ವಿಎಫ್ಎಕ್ಸ್ ಹಾಗೂ ಸ್ಟಾರ್ ನಟರ ವಿಭಿನ್ನ ಅವತಾರಗಳು ಸಿನಿಪ್ರಿಯರ ಗಮನ ಸೆಳೆಯುತ್ತಿವೆ.

ರಾಮನಾಗಿ ರಣಬೀರ್ ಕಪೂರ್ ಶಾಂತ ಸ್ವರೂಪದಲ್ಲೂ ಶೌರ್ಯ ಪ್ರದರ್ಶಿಸಿದ್ರೆ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ರೌದ್ರಾವತಾರದಲ್ಲಿ ಅಬ್ಬರಿಸಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಳ್ಳಲಿದ್ದಾರೆ.

ಸೀತಾಪಹರಣ… ಜಟಾಯುವಿನ ತ್ಯಾಗ… ರಾಮನ ಹೋರಾಟ… ರಾವಣನ ಪ್ರತಿಜ್ಞೆ… ಹೀಗೆ ರಾಮಾಯಣದ ರೋಚಕ ಸನ್ನಿವೇಶಗಳನ್ನು ಹೊಸ ದೃಶ್ಯವೈಭವದೊಂದಿಗೆ ಕಟ್ಟಿಕೊಡುವ ಪ್ರಯತ್ನ ನಡೆದಿದೆ.

ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಎರಡನೇ ಟ್ರೇಲರ್ ಅನಾವರಣಗೊಂಡಿದೆ ಎಂದು ತಿಳಿಸಲಾಗಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಚಿತ್ರತಂಡದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಮೊದಲ ಭಾಗ ನವೆಂಬರ್ 5ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರುವ ನಿರೀಕ್ಷೆಯಿದೆ.

- Advertisement -spot_img

More articles

- Advertisement -spot_img

Latest article