No menu items!
3.2 C
Munich
Friday, April 24, 2026

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

Must read

ಈಗೆಲ್ಲಾ ಆಗಿನ ಕಾಲದ ರೀತಿಯಲ್ಲಿ ವಧು-ವರರನ್ನು ಹುಡ್ಕೋಡು ಅಷ್ಟೊಂದು ಕಷ್ಟವೇನಲ್ಲ. ವಧು ವರರನ್ನು ಹುಡ್ಕೋಕಂತನೆ ಮ್ಯಾಟ್ರಿಮೋನಿಯಲ್ ಸೈಟ್ ಇದೆ. ಇದ್ರ ಮೂಲಕ ನಮಗೆ ಇಷ್ಟವಾದ ವಧು ವರರ ಕುರಿತು ಮಾಹಿತಿ ಪಡ್ಕೊಳ್ಬೋದು. ಆದ್ರೆ ಇಲ್ಲೊಂದು ಘಟನೆ ನಡಿದಿರೋದು ಕೇಳಿದ್ರೆ ವೈವಾಹಿಕ ತಾಣಗಳಲ್ಲಿ ನಿಮ್ಮ ನಂಬರ್ ಕೊಡೋದನ್ನ ನಿಲ್ಲಿಸ್ಬಿಡ್ತೀರ..! ಈ ಸೈಟ್‍ನ ಮೂಲಕ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಮಹಿಳಾ ದಂತ ವೈದ್ಯೆಯ ನಂಬರ್‍ನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕೊಟ್ಟು ಅವರ ಮೂಲಕ ನೂರಕ್ಕೂ ಹೆಚ್ಚು ಅಶ್ಲೀಲ ಕರೆಗಳನ್ನು ಮಾಡಿಸಿದ್ದಾನೆ..! ಇದರಿಂದ ಬೇಸತ್ತ ವೈದ್ಯೆ ಈಗ ಸೈಬರ್ ಅಪರಾದ ದಳದ ಮೊರೆ ಹೋಗಿದ್ದಾಳೆ..! ಸಂತ್ರಸ್ತೆ ಡೆಂಟಿಸ್ಟ್ ಗೆ ಈಗಾಗ್ಲೆ ಒಂದು ವಿವಾಹವಾಗಿ ವಿಚ್ಚೇದನವೂ ಕೂಡ ಆಗಿದೆ. ಸದ್ಯಕ್ಕೆ ತಮ್ಮ ಪೋಷಕರ ಜೊತೆಯಲ್ಲಿರುವ ಈಕೆ ಎರಡನೇ ಮದುವೆಯಾಗಲು ನಿರ್ಧರಿಸಿದ್ದಳು. ಇದಕ್ಕಾಗಿ ಸೂಕ್ತ ವರನ ಆಯ್ಕೆಗಾಗಿ ಮ್ಯಾಟ್ರಿಮೊನಿಯಲ್ ಸೈಟ್‍ನಲ್ಲಿ ಹೆಸರು ನೊಂದಾಯಿಸಿ ಇ-ಮೇಲ್ ಮತ್ತು ಮೊಬೈಲ್ ನಂಬರ್ ನೀಡಿದ್ದಾಳೆ. ಈ ನಂಬರ್‍ಗೆ ಜನವರಿ.1ರಂದು ಕರೆ ಮಾಡಿದ ವ್ಯಕ್ತಿಯೋರ್ವ ವಿವಾಹ ಪ್ರಸ್ತಾಪ ಮುಂದಿಟ್ಟಿದ್ದಾನೆ. ಆತನ ವೃತ್ತಿ, ಶಿಕ್ಷಣ ಹಾಗೂ ಇನ್ನಿತರೆ ವಿಷಯಗಳ ಕುರಿತು ಮಾಹಿತಿ ತಿಳಿದುಕೊಂಡು ಕುಟುಂಬಸ್ತರ ಜೊತೆ ಚರ್ಚಿಸಿದ ಬಳಿಕ ಆ ವ್ಯಕ್ತಿಯನ್ನು ರಿಜೆಕ್ಟ್ ಮಾಡಿದ್ದಾರೆ. ಆದ್ರೆ ಆ ವ್ಯಕ್ತಿ ಅಲ್ಲಿಗೆ ಸುಮ್ಮನಾಗಲಿಲ್ಲ. ಮದುವೆ ಬೇಡವಾದರೇನಂತೆ ನಮ್ಮಿಬ್ಬರ ನಡುವೆ ಸ್ನೇಹ ಸಂಬಂಧ ಬೆಳಸಿಕೊಳ್ಳೋಣ ಎಂದು ಹೇಳಿದ್ದಾನೆ. ಸರಿಯಾಗಿ ವಿವರಿಸಿ ಹೇಳು ಎಂದಾಗ ನಮ್ಮಿಬ್ಬರ ಮಧ್ಯೆ ಸೆಕ್ಸ್ ರಿಲೇಷನ್‍ಶಿಪ್ ಇರಲಿ ಎಂದು ಹೇಳಿದ್ದಾನೆ ನೋಡಿ. ಆಗ ವೈದ್ಯೆ ಇನ್ನೊಮ್ಮೆ ಕರೆ ಮಾಡಿದರೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದರೂ ಕ್ಯಾರೆ ಅನ್ನದ ಆತ ನನ್ನನ್ನು ಮದುವೆಯಾಗು ಹಾಗೂ ಸೆಕ್ಸ್ ಗೆ ಸಹಕರಿಸು ಅಂತ ಅಶ್ಲೀಲವಾಗಿ ಪೀಡಿಸುತ್ತಿದ್ದ. ಪ್ರತಿ ನಿತ್ಯವೂ ಕರೆ ಮಾಡುತ್ತಿದ್ದ ಆರೋಪಿ ನಿಮ್ಮ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದಾದ ಬಳಿಕ ಅನೇಕ ನಂಬರ್‍ಗಳಿಂದ ಕರೆಗಳು ಬಂದಿದ್ದು, ಇಂಟರ್‍ನೆಟ್‍ಗಳಲ್ಲೂ ಮಹಿಳೆಯ ಕುರಿತು ಅಶ್ಲೀಲ ಸಂದೇಶಗಳು ಬಂದಿದೆ. ಅಷ್ಟೆ ಅಲ್ಲ ಈ ಮಹಿಳೆಗೆ ಸೆಕ್ಸ್ ಬಗ್ಗೆ ಆಸಕ್ತಿ ಇದ್ದು ಆಸಕ್ತರು ಈ ನಂಬರ್‍ಗೆ ಸಂಪರ್ಕಿಸಿ ಎಂದು ಆನ್‍ಲೈನ್ ಜಾಹಿರಾತುಗಳೂ ಕೂಡ ಪ್ರಕಟವಾಗಿತ್ತು ಎಂದು ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ್ದಾಳೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article