ಪಿಯು ಪ್ರಶ್ನೆ ಪ್ರತಿಕೆ ಒಂದೇ ಭಾಷೆಯಲ್ಲಿ ಮುದ್ರಣ…!

admin
By admin
0 Min Read

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು ಒಂದೇ ಭಾಷೆಯಲ್ಲಿ ಮುದ್ರಿಸಲು ಪಿಯು ಬೋರ್ಡ್ ಆದೇಶಿಸಿದೆ. ಪೇಪರ್ ಉಳಿಸುವ ಹಾಗೂ ಸೋರಿಕೆ ತಪ್ಪಿಸೋ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲಾಗ್ತಾ ಇತ್ತು. ಈ ವರ್ಷದಿಂದ ಒಂದೇ ಭಾಷೆಯಲ್ಲಿ ಮುದ್ರಣವಾಗುತ್ತವೆ. ಇದರಿಂದ ಪೇಪರ್ ಉಳಿಸುವುದರ ಜೊತೆಗೆ ಅಕ್ರಮ ತಡೆಗಟ್ಟಬಹುದು ಎಂಬುದು ಇಲಾಖೆಯ ಯೋಚನೆಯಾಗಿದೆ.


ಇದರಿಂದ ಯಾವುದೇ ರೀತಿಯ ಗೊಂದಲಗಳಾಗೋದಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸ್ತೀವಿ ಎಂದು ಹೇಳುತ್ತಾರೆ ಪಿಯು ಬೋರ್ಡ್‍ನ ನಿರ್ದೇಶಕಿ ಶಿಖಾ.

Share This Article