No menu items!
11.1 C
Munich
Wednesday, April 29, 2026

ರಾಷ್ಟ್ರ ಧ್ವಜವನ್ನೇ ಬದಲಿಸಲು ಮುಂದಾದ ಸರ್ಕಾರ..! ದೇಶದ ಪ್ರಜೆಗಳ ಮುಂದಿದೆ ನಾಲ್ಕು ಆಯ್ಕೆಗಳು..!

Must read

ನ್ಯೂಜಿಲೆಂಡ್ ನಲ್ಲಿ ಈಗ ಹೊಸ ಸುದ್ದಿ ವೈರಲ್ ಆಗಿದೆ. ಅದೇನೆಂದರೆ ಆ ದೇಶದ ಧ್ವಜವನ್ನು ಬದಲಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ದೇಶದ ಜನರ ಅಭಿಪ್ರಾಯ ಸಂಗ್ರಹಿಸಲು ಸಜ್ಜಾಗಿದ್ದು, ಈಗಾಗಲೇ ಜನರು ತಮಗೆ ಇಷ್ಟವಾಗುವ ಧ್ವಜ ಯಾವುದು ಇರಬೇಕೆಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನ್ಯೂಜಿಲೆಂಡ್ ನಲ್ಲಿ 1900ಕ್ಕೂ ಹಿಂದಿನಿಂದಲೂ ಬಳಕೆಯಲ್ಲಿರುವ ರಾಷ್ಟ್ರಧ್ವಜ ಬದಲಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ದೇಶದ ಜನರು ತಮ್ಮ ಅಭಿಪ್ರಾಯ ತಿಳಿಸುವಂತೆ ಕೋರಿದ್ದು, ನವೆಂಬರ್ 20ರಿಂದ ಡಿಸೆಂಬರ್ 11ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಿರುವ ಧ್ವಜದ ಜೊತೆಗೆ ಐದು ವಿಭಿನ್ನ ಧ್ವಜಗಳ ಮಾದರಿಯನ್ನು ಬರೋಬ್ಬರಿ ಮೂರು ಮಿಲಿಯನ್ ಬಾಂಡ್ ಪೇಪರ್ ಬಳಸಿ ಮುದ್ರಿಸಿ ಕೊಡಲಾಗಿದೆ. ಯಾವುದಕ್ಕೆ ಜನರು ಶೇಕಡಾ 65ಕ್ಕಿಂತಲೂ ಹೆಚ್ಚು ಒಲವು ತೋರುತ್ತಾರೆಯೋ ಅದನ್ನೇ ದೇಶದ ಧ್ವಜವನ್ನಾಗಿ ಸ್ವೀಕರಿಸಲು ನಿರ್ಧರಿಸಲಾಗಿದೆ.
2016ರ ಮಾರ್ಚ್ ನಲ್ಲಿ ಹೊಸ ರಾಷ್ಟ್ರಧ್ವಜ ಹಾರಿಸಲಾಗುವುದು ಎಂದು ಹೇಳಲಾಗಿದ್ದು, ಈಗಾಗಲೇ ದೇಶದಲ್ಲಿ ಜನ ತಮ್ಮಿಷ್ಟದ ಧ್ವಜ ಯಾವುದೆಂದು ಗುರುತು ಮಾಡಿ ಅಂಚೆ ಮೂಲಕ ಮತ ಹಾಕಿದ್ದಾರೆ. ಇನ್ನೂ ಡಿಸೆಂಬರ್ 11ರವರೆಗೆ ಕಾಲಾವಕಾಶ ಇರುವುದರಿಂದ ರಾಷ್ಟ್ರಧ್ವಜದ ಆಯ್ಕೆಗಾಗಿ ಅಲ್ಲಿನ ಜನರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ ಹಳೆ ಧ್ವಜಗಳು ಒಂದೇ ಮಾದರಿಯದ್ದಾಗಿದ್ದು, ಜನರಿಗೆ ಗುರುತಿಸಲು ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಆದ್ದರಿಂದ ನ್ಯೂಜಿಲೆಂಡ್ ಸರ್ಕಾರ ಹಳೆಯ ಮಾದರಿಯ ಧ್ವಜದ ಜೊತೆಗೆ ಹೊಸ ಧ್ವಜಗಳಲ್ಲಿ ಯಾವುದು ರಾಷ್ಟ್ರ ಧ್ವಜ ಆಗಬೇಕು ಎಂಬ ಆಯ್ಕೆಯನ್ನು ಅಲ್ಲಿನ ನಾಗರಿಕರಿಗೆ ನೀಡಿದೆ. ಏನೇ ಆಗಲಿ ಅಲ್ಲಿನ ಜನರಿಗೆ ಹೊಸ ಧ್ವಜದ ಆಯ್ಕೆ ಸಿಕ್ಕಿರುವುದು ಖುಷಿ ನೀಡಿದೆಯಂತೆ.
ಇನ್ನೊಂದು ಅಚ್ಚರಿಯ ಅಂಶವೇನೆಂದರೆ ಚೀನಾದಲ್ಲಿ ಈಗಾಗಲೇ ನ್ಯೂಜಿಲೆಂಡ್ ನ ಒಂದು ಮಾದರಿಯ ಧ್ವಜವನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ನ್ಯೂಜಿಲೆಂಡ್ ಗೆ ರಫ್ತಾಗುವ ಹಣ್ಣುಗಳ ಮೇಲೆ ಹೊಸ ಧ್ವಜದ ಮಾದರಿಯ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಚೀನಾದ ಮಾರುಕಟ್ಟೆ ತಂತ್ರ ಹೇಗಿದೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ.

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article