ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!

0
98

ಆಕಾಶ್ ಆಗುಂಬೆಯಲ್ಲಿ ಎಸ್ಎಸ್ಎಲ್ಸಿ ತನಕ ಓದಿ ಪಿಯು ಮಾಡಲಿಕ್ಕೆ ಶೃಂಗೇರಿಗೆ ಹೋದ..! ಚಿಕ್ಕಮಗಳೂರಿನಿಂದ ಬಂದ ಪೂರ್ವಿ ಆಗಲೇ ಆಕಾಶ್ ಗೆ ಪರಿಚಿತಳಾಗಿದ್ದು..! ಈ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿತ್ತು..! ಪದವಿ ಪ್ರವೇಶಿಸುವ ಟೈಮಲ್ಲಿ ಆಕಾಶ್ ಪೂರ್ವಿ ಜೋಡಿಹಕ್ಕಿಗಳಾಗಿ ಬಿಟ್ಟಿದ್ದರು..! ಒಟ್ಟಿಗೆ ಪದವಿಯನ್ನು ಮುಗಿಸಿದ್ರು..! ಇಬ್ಬರೂ ಮಂಗಳೂರು ವಿವಿಯಲ್ಲಿ ಎಂಬಿಎ ಕೂಡ ಕಂಪ್ಲೀಟ್ ಮಾಡಿದ್ರು..! ಎಂಬಿಎ ಮುಗಿಯುತ್ತಿದ್ದಂತೆ ಬೆಂಗಳೂರತ್ತ ಬಂದ ಇವರು ಒಂದೊಂದು ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡರು..! ಇಬ್ಬರಿಗೂ ಕೈ ತುಂಬಾ ಸಂಬಳವೂ ಸಿಗ್ತಾ ಇತ್ತು..!
ಪಿಯುಸಿಯಿಂದ ಎಂಬಿಎ ಮಾಡೋತನಕ ಯಾವಾಗಲೂ ಒಟ್ಟಾಗಿ ಸುತ್ತುತ್ತಾ.. ದೂರವಿರುವಾಗ ಚ್ಯಾಟಿಂಗ್ ಮಾಡ್ತಾ ಕಾಲ ಕಳೀತಿದ್ದ ಇವರಿಗೆ ಕೆಲಸ ಸಿಕ್ಕಮೇಲೆ ಭೇಟಿ ಆಗುವುದು ಕಷ್ಟವಾಯ್ತು..! ಚ್ಯಾಟಿಂಗ ಕಡಿಮೆ ಆಯ್ತು..! ಶನಿವಾರ-ಭಾನುವಾರ ಮಾತ್ರ ಭೇಟಿ ಆಗ್ತಾ ಇದ್ರು.. ಒಟ್ಟಿಗೇ ಕಾಲಕಳೀತಾ ಇದ್ರು..! ಆದರೆ ಪ್ರೀತಿ ಮಾತ್ರ ತುಂಬಾನೇ ಜಾಸ್ತಿ ಆಯ್ತು..! ದೂರ ಇದ್ದಾಗ ಪ್ರೀತಿ ಜಾಸ್ತಿ ಅಲ್ವೇ..?!
ಕೆಲಸ ಸಿಕ್ಕಿ ಎರಡು ವರ್ಷದ ನಂತರ ಇಬ್ಬರೂ ಮನೆಯಲ್ಲಿ ತಮ್ಮ ತಮ್ಮ ಪ್ರೀತಿಯನ್ನು ನೇರವಾಗಿಯೇ ಹೇಳಿ ಬಿಟ್ಟರು..! ಜಾತಿ, ಆಸ್ತಿ, ಅಂತಸ್ತು ಯಾವುದೂ ಅಡ್ಡಿ ಬರಲಿಲ್ಲ..! ಅದೃಷ್ಟವಶಾತ್ ಇಬ್ಬರ ಮನೆಯವರೂ ಒಪ್ಪಿ ಬಿಟ್ರು..! ಮಾತಿಕತೆಯೂ ಆಯ್ತು..! ಮದುವೆ ನಿಶ್ವಯವೂ ಆಗಿ ಬಿಡ್ತು..! ಆಕಾಶ್ ಪೂರ್ವಿಯ ಕೈ ಬೆರಳಿಗೆ ಉಂಗುರವನ್ನೂ ತೊಡಿಸಿಯೇ ಬಿಟ್ಟ..!
ಇವರ ಮದುವೆ ತಯಾರಿ ಜೋರಾಗಿ ನಡೆಯಿತು..! ತೀರ್ಥಹಳ್ಳಿಯ ಕಲ್ಯಾಣ ಮಂದಿರವೊಂದು ಇವರ ಮದುವೆಗೆ ಸಜ್ಜಾಯಿತು..! ಮದುವೆ ಹಿಂದಿನ ದಿನವೇ ಪೂರ್ವಿ ಮತ್ತು ಆಕಾಶ್ ಕಡೆಯ ಹತ್ತಿರದ ಸಂಬಂಧಿಗಳು ಕಲ್ಯಾಣಮಂಟಪದಲ್ಲಿ ಹಾಜರಿದ್ದರು..!
ಸುಮಾರು ರಾತ್ರಿ ಏಳುಗಂಟೆ ಹೊತ್ತಿಗಷ್ಟೇ ಪೂರ್ವಿ ಆಕಾಶ್ ನನ್ನು ಮಾತನಾಡಿಸಿ ಹೋಗಿದ್ದಳು..! ಇಬ್ಬರೂ ನಾಳಿನ ಮದುವೆ ಸಂಭ್ರಮ, ಖುಷಿಯಲ್ಲಿದ್ದರು..! ಹೀಗಿರುವಾಗಲೇ ರಾತ್ರಿ 12 ಗಂಟೆ ಸುಮಾರಿಗೆ ಆಕಾಶ್ ಗೆ ಶೃಂಗೇರಿಯ ಗೆಳೆಯ ಅವಿನಾಶ್ ಫೋನ್ ಮಾಡಿದ. ಮಗಾ, ನಾನು ಕೈಮರದಲ್ಲಿದ್ದೇನೆ’..! ನನ್ನ ಬೈಕ್ ಹಾಳಾಯ್ತು..! ಯಾರನ್ನಾದರೂ ಕಳುಹಿಸಿ ಕೊಡೋ ಅಂತಾನೆ..! ರಾತ್ರಿ 12 ಆಗಿದೆ ಇಷ್ಟೊತ್ತಿಗೆ ಯಾರನ್ನ ಕಳಿಸೋದು ಅಂತ ಯೋಚನೆ ಮಾಡಿ, ತಾನೇ ಯಾರಿಗೂ ತಿಳಿಯದಂತೆ ತಮ್ಮನ ಜೇಬಲ್ಲಿದ್ದ ಕೀ ತಗೊಂಡು ಗೆಳೆಯನನ್ನು ತನ್ನ ಮದುವೆಗೆ ಕರ್ಕೊಂಡು ಬರಲು ತಾನೇ ಕೈ ಮರದತ್ತ ಹೋಗುತ್ತಾನೆ..! ಗೆಳೆಯನನ್ನು ಬೈಕಿನಲ್ಲಿ ಕೂರಿಸಿಕೊಂಡು ತೀರ್ಥಹಳ್ಳಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ಬಾಳೆಬೈಲ್ ಸಮೀಪ ಲಾರಿಯೊಂದು ಮುಖಾ ಮುಖಿ ಡಿಕ್ಕಿ ಹೊಡೆಯುತ್ತೆ..! ಆಕಾಶ್ ಗೂ, ಆತನ ಗೆಳೆಯನಿಗೂ ತುಂಬಾ ಪೆಟ್ಟಾಗುತ್ತೆ..! ಗೆಳೆಯ ಅವಿನಾಶ್ ಗಿಂತ ಆಕಾಶ್ ಪರಿಸ್ಥಿತಿಯೇ ಗಂಭೀರ ಆಗಿರುತ್ತೆ..! ಯಾರ ಪುಣ್ಯವೋ ಗೊತ್ತಿಲ್ಲ..! ಮಂಗಳೂರು ಕಡೆಯಿಂದ ಬಂದ ಅದ್ಯಾರೋ ಆ ಹೊತ್ತಲ್ಲಿ ತಮ್ಮ ಕಾರಲ್ಲೇ ಇಬ್ಬರನ್ನೂ ಕರ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸ್ತಾರೆ..! ಆಕಾಶ್ ಗೆ ಮೊಬೈಲ್ ತೆಗೆದು ಕೊಂಡು ಮನೆಯವರಿಗೆ ವಿಷಯ ತಿಳಿಸೋಣ ಅಂತ ಕಾಲ್ ಮಾಡೋಕೆ ನೋಡ್ತಾರೆ..! ಬೇಡ, ಈಗ ಬೇಡ ಬೆಳಿಗ್ಗೆ ಮಾಡೋಣ ಅಂತ ಡಿಸೈಡ್ ಮಾಡಿ ಕಾರಿನಲ್ಲಿ ಕರ್ಕೊಂಡು ಬಂದ ಆ ಮೂವರೇ ಆಸ್ಪತ್ರೆಯಲ್ಲಿ ಉಳಿಯುತ್ತಾರೆ..!
ಬೆಳಿಗ್ಗೆ ಐದು ಐದುವರೆ ಸುಮಾರಿಗೆ ಆಕಾಶ್ ಎಲ್ಲಿ ಅಂತ ಎಲ್ಲರೂ ಹುಡುಕೋಕೆ ಶುರು ಮಾಡ್ತಾರೆ..! ಅವನ ತಮ್ಮ ಸುಕೇಶ್ ತನ್ನ ಜೇಬಲಿಟ್ಟ ಬೈಕ್ ಕೀ ಇಲ್ಲ..! ಅಣ್ಣನೇ ತೆಗೆದುಕೊಂಡು ಹೋಗಿರಬಹುದೆಂದು ಹೇಳುತ್ತಾನೆ..! ಅವನೇ ಆಕಾಶ್ ಮೊಬೈಲ್ ಗೆ ಫೋನ್ ಮಾಡ್ತಾನೆ..! ಅದೃಷ್ಟಕ್ಕೆ ಫೋನ್ ಸ್ವಿಚ್ ಆಫ್ ಆಗಿರಲ್ವಲ್ಲ..! ಆಸ್ಪತ್ರೆಗೆ ಸೇರಿಸಿ ವ್ಯಕ್ತಿಯೊಬ್ಬರು ಆಕಾಶ್ ಮತ್ತು ಆತನ ಗೆಳೆಯನಿಗೆ ಆ್ಯಕ್ಸಿಡೆಂಟ್ ಆಗಿರೋ ಬಗ್ಗೆ ಹೇಳುತ್ತಾರೆ..! ತಡಮಾಡದೇ ಆಕಾಶ್ ಮನೆಯವರು ಮತ್ತು ಪೂರ್ವಿ, ಪೂರ್ವಿ ಮನೆಯವರೂ ಕೂಡ ಆಸ್ಪತ್ರೆಗೆ ಹೋಗುತ್ತಾರೆ..! ಅಟಷ್ಟೊತ್ತಿಗೆ ಅವಿನಾಶ್ ಗೆ ಪ್ರಜ್ಞೆ ಬಂದಿರುತ್ತೆ..! ಕಾಲಿಗೆ ಬಲವಾದ ಪೆಟ್ಟು ತಿಂದಿದ್ದ ಅವಿನಾಶ್ ಎಲ್ಲಾ ವಿಷಯವನ್ನೂ ವಿವರಿಸುತ್ತಾನೆ..!
ಸ್ವಲ್ಪ ಹೊತ್ತಲೇ ಡಾಕ್ಟರ್, ಆಕಾಶ್ ಗೆ ತಲೆಗೆ ಬಲವಾದ ಹೊಡೆತ ಬಿದ್ದಿದೆ..! ಜೀವಕ್ಕೇನೂ ಅಪಾಯವಿಲ್ಲ..! ಆದರೆ ನೆನಪಿನ ಶಕ್ತಿ ಬರೋದು ತುಂಬಾ ಕಷ್ಟ ಅನಿಸ್ತಾ ಇದೆ..! ನೀವು ಈ ಕೂಡಲೇ ಮಣಿಪಾಲ್ ಗೆ ಕರ್ಕೊಂಡು ಹೋಗಿ ಅಂತ ಹೇಳ್ತಾರೆ..! ಮದುವೆ ಮನೆಗೆ ಬಂದವರೆಲ್ಲಾ ಛೇ ಹೀಗಾಯ್ತಲ್ಲಾ ಪಾಪ, ಅಂತ ಮನೆ ಕಡೆ ಹೋದರೆ.. ಮದುಮಗನನ್ನು ಮಣಿಪಾಲ್ ಗೆ ಕರ್ಕೊಂಡು ಹೋದ್ರು..!
ಮಣಿಪಾಲ್ ಸೇರಿ 2-3 ತಿಂಗಳಾದರೂ ಆಕಾಶ್ ಗುಣಮುಖನಾಗದೇ ಇದ್ದಾಗ, ಅವನ ಅಪ್ಪ ಅಮ್ಮನೇ ಪೂರ್ವಿಗೆ ಬೇರೆ ಮದುವೆ ಮಾಡುವಂತೆ ಅವಳ ಅಪ್ಪ ಅಮ್ಮನಲ್ಲಿ ವಿನಂತಿಸಿಕೊಳ್ಳುತ್ತಾರೆ..! ಪೂರ್ವಿಗೂ ಹೇಳುತ್ತಾರೆ..! ಆದರೆ ಆಕಾಶ್ ಗುಣ ಮುಖನಾಗಿಯೇ ಆಗುತ್ತಾನೆ..! ಮದುವೆ ಆದರೆ ಅವನನ್ನೇ ಮದುವೆ ಆಗೋದು ಅಂತ ಹಠ ಹಿಡಿದು ಕೂರುತ್ತಾಳೆ..! ಮೊದಲೇ ನೊಂದಿರೋ ಪೂರ್ವಿಗೆ ಯಾರೂ ಬೇರೆ ಮದುವೆ ಆಗೆಂದು ಒತ್ತಾಯ ಮಾಡಲ್ಲ. ಸುಮಾರು ಒಂದು ವರ್ಷದ ನಂತರ ಆಕಾಶ್ ಚೇತರಿಸಿ ಕೊಳ್ಳುತ್ತಾನೆ..! ಅವನು ಸಂಪೂರ್ಣ ಗುಣ ಮುಖನಾಗಲು ಹೆಚ್ಚು ಕಡಿಮೆ ಎರಡು ವರ್ಷವಾಗುತ್ತೆ..! ಗುಣಮುಖನಾದರೂ ಮೊದಲಿನಂತೆ ಆತ ಚುರುಕಾಗಿರಲ್ಲ..! ಮುಖ ವಿರೂಪವಾಗಿದೆ..! ಹೀಗಿದ್ದರೂ ಪೂರ್ವಿ ಅವನನ್ನೇ ಮದುವೆ ಆಗುವುದಾಗಿ ಹಠ ಮಾಡಿ ಎರಡು ತಿಂಗಳ ಹಿಂದಷ್ಟೇ ಆಕಾಶ್ ನನ್ನು ಮದುವೆ ಆಗಿದ್ದಾಳೆ..! ಈಗ ಆಕಾಶ್ ಅವಳಿಂದಾಗಿ ಖುಷಿ ಖುಷಿಯಿಂದ ಇದ್ದಾನೆ..! ಮೊದಲಿನಂತಾಗುತ್ತಿದ್ದಾನೆ..! ಪೂರ್ವಿ ಪ್ರೀತಿಸಿದ ಹುಡುಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ..! ಈಗ ಅವಳು ಆಕಾಶ್ ಜೊತೆ ಮೈಸೂರಲ್ಲಿದ್ದಾಳೆ..! ಅವಳೊಬ್ಬಳೇ ಕೆಲಸಕ್ಕೆ ಹೋಗ್ತಾ ಆಕಾಶ್ ನನ್ನು ನೋಡಿಕೊಳ್ತಾ ಇದ್ದಾಳೆ..! ಆಕಾಶ್ ಇನ್ನೊಂದು ವರ್ಷದೊಳಗೆ ಕೆಲಸಕ್ಕೆ ಹೋಗುವಂತಾಗ ಬಹುದು..!
ಪೂರ್ವಿ ಯಂಥಾ ಹುಡುಗಿ ಎಷ್ಟು ಜನ ಹುಡುಗರಿಗೆ ಸಿಗಲು ಸಾಧ್ಯ..?! ಪೂರ್ವಿ ನೀವು ತುಂಬಾ ಗ್ರೇಟ್ ಕಣ್ರೀ..! ನಿಮ್ಮ ಸಂಸಾರ ಚೆನ್ನಾಗಿರಲಿ.. ಅನ್ನೋದೆ ನಮ್ಮ ಆಸೆ..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

LEAVE A REPLY

Please enter your comment!
Please enter your name here