ಇವನು ನಿಜಕ್ಕೂ ತಂದೆಯಲ್ಲ ಮಾನವೀಯತೆ ಇಲ್ಲದ ರಾಕ್ಷಸ. ಮೂರು ವರ್ಷದ ತನ್ನ ಮಗನಿಗೆ ತಲೆ ಕೆಳಗಾಗಿ ನೇತುಹಾಕಿ ರಕ್ತ ಬರುವಂತೆ ಹೊಡಿದಿದ್ದಾನೆ.
ಘಟನೆ ನಡೆದಿರೋದು ಮಧ್ಯಪ್ರದೇಶದ ಶಾಜಾಪೂರದಲ್ಲಿ. ಧರ್ಮೇಂದ್ರ ಎಂಬಾತ ತಂದೆ ಎನಿಸಿಕೊಂಡಿರೋ ರಾಕ್ಷಸ. ಈತ ತನ್ನ ಮಗ ರಾಜ್ ಗೆ 10ರವರೆಗೆ ಮಗ್ಗಿ ಎಣಿಸೋಕೆ ಹೇಳಿದ್ದಾನೆ. 3 ವರ್ಷದ ರಾಜ್ ಗೆ ಎಣಿಸೋಕೆ ಬರ್ಲಿಲ್ಲ ಅಂತ ತಲೆ ಕೆಳಗೆ ಮನ ಬಂದಂತೆ ಹೊಡೆದಿದ್ದಾನೆ. ತಪ್ಪಿಸಲು ಬಂದ ತಾಯಿ ಬುಲ್ ಬುಲ್ ಗೂ ಥಳಿಸಿದ್ದಾನೆ. ಬುಲ್ ಬುಲ್ ಕಿರುಚಾಟ ಕೇಳಿ ನೆರೆಮನೆಯವರು ಬಂದು ಧರ್ಮೇಂದ್ರನನ್ನು ಹೊರಗೆ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿ ತಲೆಮರೆಸಿಕೊಂಡಿದ್ದಾನೆ. ಈತನಿಗೆ ಇನ್ನೊಬ್ಬಳು ಹೆಂಡ್ತಿ ಇದ್ದಾಳೆ ಎಂದು ಬುಲ್ ಬುಕ್ ಆರೋಪಿಸಿದ್ದಾರೆ. ಗಂಡನ ಕಿರುಕುಳದ ಬಗ್ಗೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರಂತೆ ಬುಲ್ ಬುಲ್.