No menu items!
30.9 C
Munich
Thursday, June 18, 2026

10 ಬಾರಿ ಗುಂಡು ಹಾರಿಸಿ ವೃದ್ಧೆಯ ಕೊಲೆ…!

Must read

ದುಷ್ಕರ್ಮಿಗಳು 60 ವರ್ಷದ ವೃದ್ಧೆಯ ಮೇಲೆ 10 ಬಾರಿ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ನಿಚೇತರ್ ಕೌರ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವೃದ್ಧೆ. 2016ರಲ್ಲಿ ನಿಚೇತರ್ ಕೌರ್ ಅವರ ಪತಿಯನ್ನು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧೆಯ ಪತಿಯನ್ನು ಕೊಲೆ ಮಾಡಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಕೆಲವು ಸಂಬಂಧಿಕರು ಜೈಲು ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ ಕೌರ್ ಮತ್ತು ಪುತ್ರ ಬಲ್ವಿಂದರ್ ಇಂದು (ಗುರುವಾರ) ಸಾಕ್ಷಿ ಹೇಳಲು ಕೋರ್ಟ್‍ಗೆ ಹೋಗ್ಬೇಕಿತ್ತು.


ಆದರೆ ಬುಧವಾರ ಇವರ ಮನೆಯ ಬಳಿ ಬಂದ ಮೂವರು ದುಷ್ಕರ್ಮಿಗಳು ಮನೆ ಹೊರಗಡೆಯ ಮಂಚದ ಮೇಲೆ ಕುಳಿತಿದ್ದ ಕೌರ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಕೇವಲ ಎರಡು ಅಡಿ ಅಂತರಿಂದ 10 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದು ಮನೆಯ ಎದುರು ಅಳವಡಿಸಿದ್ದ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.


ಅದೆರೀತಿ ಕೌರ್ ಅವರ ಮಗ ಬಲ್ವಿಂದರ್ ಅವರನ್ನು ಗ್ರಾಮದ ಬಳಿ ಗುಂಡು ಹಾರಿಸಿ ಕೊಂದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article