ಒಂದೇ ಇನ್ನಿಂಗ್ಸ್ ನಲ್ಲಿ 1045 ರನ್…!

admin
By admin
1 Min Read

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಆಟೋ ಚಾಲಕನ ಪುತ್ರ ಪ್ರಣವ್ ಧನವಾಡೆ ಮಾಡಿದ್ದ ದಾಖಲೆಯನ್ನು ಮುಂಬೈಯನ ಮತ್ತೊಬ್ಬ ಯುವ ಕ್ರಿಕೆಟಿಗ ಮುರಿದಿದ್ದಾರೆ.


ಧನವಾಡೆ ದಾಖಲೆ ಮುರಿದಿರೋದು 13 ವರ್ಷದ ಬಾಲಕ‌ ತನಿಷ್ಕ್ ಗಾವಟೆ. ಅಂಡರ್-14 ನೆವಿ ಮುಂಬೈ ಶೀಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ತನಿಷ್ಕ್ ಔಟಾಗದೇ 1045 ರನ್ ಬಾರಿಸಿದ್ದಾನೆ.


ಕೊಪರ್‌ ಖೈರೇನ್‌‌ನ ಯಶವಂತ್‌ರಾವ್ ಚವ್ಹಾಣ್‌ ಆಂಗ್ಲ ಮಾಧ್ಯಮ ಶಾಲೆಯ ವಿರುಧ್ಧ ತನಿಷ್ಕ್ 515 ಎಸೆತಗಳಲ್ಲಿ 149 ಬೌಂಡರಿ 67ಸಿಕ್ಸರ್‌ ಮೂಲಕ ಶಾಲಾ ಕ್ರಿಕೆಟ್ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಭಂಡಾರಿ ಕಪ್ ಇಂಟರ್ ನ್ಯಾಷನಲ್ ಟೂರ್ನಮೆಂಟ್ ನಲ್ಲಿ ಧನವಾಡೆ ಮಾಡಿದ್ದ 1009 ರನ್ ಗಳ ದಾಖಲೆಯನ್ನು ತನಿಷ್ಕ್ ಅಳಿಸಿ ಹಾಕಿದ್ದಾನೆ.

Share This Article