No menu items!
17.7 C
Munich
Friday, May 1, 2026

ಗರ್ಭಿಣಿ ಅನುಮಾನಾಸ್ಪದ ಸಾವು

Must read

ಎರಡು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಡ್ಯದ ಪಾಂಡಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ‌.
ಪ್ರೀತಿ (20 ) ಮೃತೆ. ಈಕೆ ಎಂಟು ತಿಂಗಳ ಹಿಂದಷ್ಟೇ ಮೇಲುಕೋಟೆಯ ಆಟೋಚಾಲಕ ಮಂಜುನಾಥ್ ಜೊತೆ ಪ್ರೇಮ ವಿವಾಹವಾಗಿದ್ದಳು.

ಎರಡು‌ ತಿಂಗಳ ಗರ್ಭಿಣಿಯಾಗಿದ್ದ ಈಕೆಯ ಶವ ಗುರುವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಎಂದು ಪರಿಗಣಿಸಲಾಗಿದ್ದರೂ ಇದೊಂದು ಕೊಲೆ ಎಂದು ಮೃತೆಯ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article