ಹಿಂದೆ ರಾಜ್, ಅಂದು ವಿಷ್ಣು, ಇಂದು ದರ್ಶನ್….!

admin
By admin
1 Min Read

ಹಿರಿಯ ನಟ ಶಂಕರ್ ಅಶ್ವಥ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಡಾ.‌ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರಿಗೆ ಹೋಲಿಸಿದ್ದಾರೆ.

ನಟನೆಗೆ ಅವಕಾಶ ಸಿಗದೇ ಕ್ಯಾಬ್ ಡ್ರೈವರ್ ಆಗಿ ದುಡಿಮೆಯ ದಾರಿ ಕಂಡುಕೊಂಡಿದ್ದ ಶಂಕರ್ ಅಶ್ವಥ್ ಅವರು ದರ್ಶನ್ ಅಭಿನಯದ ಯಜಮಾನ ಸಿನಿಮಾ‌ದ ಮೂಲಕ ಚಿತ್ರರಂಗಕ್ಮೆ ಮರಳಿದ್ದಾರೆ.
ದರ್ಶನ್ ಅವರ ಗುಣವನ್ನು ಮೆಚ್ಚಿರುವ ಶಂಕರ್ ಅವರು ಹಿಂದೆ ಡಾ. ರಾಜ್, ಅಂದು, ವಿಷ್ಣುವರ್ಧನ್, ಇಂದು ದರ್ಶನ್ ಎಂದು ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ ಮಾಡಿದ್ದಾರೆ.


ಇದು ಸತ್ಯಸಂಗತಿ: ಎಲ್ಲರಲ್ಲೂ ಪರಮಾತ್ಮನು ಇರುತ್ತಾನೆ ಅದನ್ನು ಮುಟ್ಟಲು ಸುಲಭವಾದ ಮಾರ್ಗ ಅಂದರೆ ತಿನ್ನಲು ಏನಾದರೂ ಕೊಟ್ಟು ಸಂತೃಪ್ತಿ ಪಡಿಸುವುದು, ಎಂದು ನನ್ನ ತಂದೆ ಹೇಳುತ್ತಿದ್ದರು.ಈಮೂರು ಮಹಾನ್ ವ್ಯಕ್ತಿಗಳಿಗೆ ನಮ್ಮಿಂದ ಸೇರಿದ ಅಲ್ಪ ತಿನಿಸಿನಿಂದ ಸಂತೃಪ್ತರಾದರೆಂದು ತಿಳಿಸಲು ಹರ್ಷಪಡುತ್ತೇನೆ ಎಂದು ಶಂಕರ್ ಎಫ್ ಬಿಯಲ್ಲಿ ಬರೆದುಕೊಂಡಿದ್ದಾರೆ.

Share This Article