No menu items!
4.8 C
Munich
Saturday, May 2, 2026

ಬೆಂಗಳೂರಿನ 5 ಕಡೆಗಳಲ್ಲಿ ಹೊಸ ಕ್ರೀಡಾಂಗಣಗಳ ನಿರ್ಮಾಣ….! ಎಲ್ಲೆಲ್ಲಿ ಗೊತ್ತಾ?

Must read

ಬೆಂಗಳೂರಿನ ಒಟ್ಟು 5 ಕಡೆಗಳಲ್ಲಿ ನೂತನ ಕ್ರೀಡಾಂಗಣಗಳು ನಿರ್ಮಾಣವಾಗಲಿವೆ‌.‌

ಗುಂಜೂರು, ದೇವನಹಳ್ಳಿ, ಎಚ್ ಎಸ್ ಆರ್ ಲೇಔಟ್ , ತಾವರೆಕೆರೆ ಮತ್ತು ಅಂಜನಾಪುರದಲ್ಲಿ ಈ ನೂತನ ಸ್ಟೇಡಿಯಂಗಳು ತಲೆ ಎತ್ತಲಿವೆ. ಈ ಕ್ರೀಡಾಂಗಣಗಳ ನಿರ್ಮಾಣದೊಂದಿಗೆ ಬೆಂಗಳೂರಿನಲ್ಲಿ ಒಟ್ಟು 13 ಕ್ರೀಡಾಂಗಣಗಳಾದಂತಾಗುತ್ತವೆ.


ಅಥ್ಲೆಟಿಕ್ ಟ್ರಾಕ್ಸ್, ಜಾವೆಲಿನ್ , ಡಿಸ್ಕಸ್ , ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಆಡಲು ಈ ಕ್ರೀಡಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.


ಪ್ರತಿ ಕ್ರೀಡಾಂಗಣ ನಿರ್ಮಾಣಕ್ಕೆ 10 ಎಕರೆ ಜಮೀನು ಬೇಕು. ಬಜೆಟ್ ನಲ್ಲಿ ಹಣ ಸಿಕ್ಕಿದ್ದು, ವಿಸ್ತ್ರತ ಯೋಜನೆ ತಯಾರಿಸಿ ಟೆಂಡರ್ ಕರೆಯುತ್ತೇವೆ. ಟೆಂಡರ್ ಅಂತಿಮವಾದ ಕೂಡಲೇ 6 ತಿಂಗಳಿಂದ ವರ್ಷದೊಳಗೆ ಕ್ರೀಡಾಂಗಣ ನಿರ್ಮಿಸ್ತೀವಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್ ಶಿವಶಂಕರ್ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article